ಸೌಮ್ಯಾಮೃತ ಕಾವ್ಯನಾಮದಿಂದ ಬರೆಯುವ ಸೌಮ್ಯ (ಸೋನು) ಅವರು ಬೆಂಗಳೂರು ನಿವಾಸಿ. ಎಂ.ಕಾಂ, ಎಂಬಿಎ ಅಧ್ಯಯನ ಮಾಡಿರು ಅವರು ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ.
ಬಯಕೆಯ ಆ ದಿನಗಳು (ಕಥಾಸಂಕಲನ), ಪ್ರೀತಿಯ ಪಯಣ (ಕವನಸಂಕಲನ), ನಗುವ ಹೂ ಅತ್ತಾಗ (ಕಾದಂಬರಿ), ನಾವಿಬ್ಬರೇ ಇದ್ದಾಗ (ನನ್ನ ಮತ್ತು ಆತ್ಮದ ನಡುವಿನ ಸಂಭಾಷಣೆ)- ಕಾದಂಬರಿ ಪ್ರಕಟಿತ ಕೃತಿಗಳು.
ಸೌಮ್ಯ ಅವರಿಗೆ ಸಾಹಿತ್ಯ ಚಿಗುರು, ಯುವ ಚೇತನ, ಕರ್ನಾಟಕ ಯುವರತ್ನ, ಕುವೆಂಪು ಕನ್ನಡರತ್ನ, ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಂದಿವೆ. ಬೆಳಕು ಸಂಸ್ಥೆಯ ಕಾರ್ಯಕ್ರಮಗಳ ನಿರ್ವಾಹಕ ಅಧ್ಯಕ್ಷೆ ಮತ್ತು ಬೆಳಕು ಪ್ರಕಾಶನದ ಅಧ್ಯಕ್ಷೆಯಾಗಿದ್ದಾರೆ. ಐವತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನವಾಚಿಸಿದ್ದೇನೆ. ಇಲ್ಲಿಯವರೆಗೂ 600ಕ್ಕೂ ಹೆಚ್ಚು ಕವನ, 50 ಸಣ್ಣಕಥೆಗಳು, 2 ಕಾದಂಬರಿ, ಹಲವಾರು ಲೇಖನಗಳು ಧಾರವಾಹಿ ಹಲವಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.