ಡಾ. ಶ್ರೀದೇವಿ ಎಲ್ ರಾಠೋಡ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕನಕಪುರ ತಾಂಡಾದವರು. ತಂದೆ ಎಲ್ ಸೋಮಪ್ಪ, ತಾಯಿ ಪ್ರೇಮಬಾಯಿ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ. ಎ ಹಾಗೂ ಕುಂಚಿ ಕೊರವ ಮಹಿಳೆಯರ ಸಬಲೀಕರಣ ವಿಷಯವಾಗಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದಿದ್ದಾರೆ. ಯು. ಜಿ. ಸಿ ಧನಸಹಾಯ ಆಯೋಗದಿಂದ ಪೋಸ್ಟ್ ಡಾಕ್ಟರಲ್ ಪದವಿಯನ್ನು ಗುಲಬಗಾ೯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸದಾ ಮಹಿಳಾ ಪರ ಕಾಳಜಿ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆಯ ನಂದೂರು ಬಿ. ಅಂಚೆ ವ್ಯಾಪ್ತಿಯ ಬಾಪುನಾಯಕ ತಾಂಡದಲ್ಲಿ ವಾಸವಿದ್ದಾರೆ.
ಲಂಬಾಣಿ ಸಮುದಾಯ ಅಹಾರ ಪದ್ಧತಿ, ಕಂಚಿ ಕೋರವರ ಆಹಾರ ಪದ್ಧತಿ, ಚಿಂದಿ ಆಯುವ ಮಹಿಳೆ ಮತ್ತು ಮಕ್ಕಳ ಆರೋಗ್ಯದ ಸ್ಥಿತಿ, ಮಹಿಳಾ ದೌ೯ಜನ್ಯ ಕುರಿತು ಪ್ರಮುಖ ಕಾನೂನುಗಳ ಆನ್ವಯಿಕ ವಿಶ್ಲೇಷಣೆ , ಕುಂಚಿ ಕೋರವ ಮಹಿಳೆಯರ ಉದ್ಯೋಗದಲ್ಲಿ ತಲ್ಲಣ , ಕುಂಚಿ ಕೋರವ ಮಹಿಳೆಯರ ಆರೋಗ್ಯದ ಸ್ಥಿತಿ, The status of education among women of "Kunchi korava "nomads ಹೀಗೆ ವಿವಿಧ ವಿಷಯಗಳ ಕುರಿತು ಚಿಂತನಾತ್ಮಕ ಹಾಗೂ ಸಾಮಾಜಿಕ ಕಳಕಳಿಯ ಲೇಖನಗಳನ್ನು ಬರೆದಿದ್ದಾರೆ.
ಕೃತಿಗಳು: ಬದುಕಿನ ಅಲೆ (ಕಥಾ ಸಂಕಲನ-2014), ವಿವಾಹ ಮತ್ತು ವರದಕ್ಷಿಣೆ (ಸ್ತ್ರೀವಾದಿ ಅಧ್ಯಯನ-2015), ರುಪಾಲಿ ಅಲ್ಲ ಕಾಳಿ (ಕಾದಂಬರಿ -2016), ಭ್ರೂಣ (ಕಾದಂಬರಿ -2018), ಕಾಲಚಕ್ರ (ಕಾದಂಬರಿ-2019), ಭಾವನೆಗಳ ಅಲೆಯಲ್ಲಿ(ಕವನ ಸಂಕಲನ 2017), ಕುಂಚಿ ಕೊರವ ಮಹಿಳೆಯರ ಸಬಲೀಕರಣ (ಸಂಶೋಧನಾತ್ಮಕ ಪ್ರಬಂಧ -2017), ಕಲಬುರ್ಗಿ ಜಿಲ್ಲೆಯ ಬಂಜಾರ ಮಹಿಳೆಯರ ಸಾಂಸ್ಕೃತಿಕ ಸಾಮಾಜಿಕ ಆರ್ಥಿಕ ಸ್ಥಿತಿ-2020. ಕುಂಚಿ ಕೋರವ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಾಯೋಗಿಕ ಸಂಶೋಧನೆ ಮಾಡಿದ್ದರಿಂದ ಚಂದನ ಟಿವಿ " ಕುಂಚಿ ಕೋರವರ ಜೀವನ ಪಯಣ" ಎಂಬ ಸಾಕ್ಷ್ಯಚಿತ್ರ (2015) ಮಾಡಿದೆ.
ಪ್ರಶಸ್ತಿ-ಪುರಸ್ಕಾರಗಳು: ವಿಜಯಪುರದ ಅಕ್ಕಮಹಾದೇವಿ ವಿ.ವಿ. ಅಂಬೇಡ್ಕರ್ ಅಧ್ಯಯನ (2013) ಕೇಂದ್ರದಿಂದ ಮಹಿಳಾ ಸಾಧಕಿ ಪ್ರಶಸ್ತಿ,