ಸತೀಶ ಬಳೆಗಾರ ಇವರು ಕುಂದಾಪುರ ತಾಲೂಕಿನ ಸಿದ್ದಾಪುರದವರು. ವೃತ್ತಿಯಲ್ಲಿ ವ್ಯಾಪಾರಿ. ಪ್ರವೃತ್ತಿಯಲ್ಲಿ ಲೇಖಕ. ಶಂಕರ್ ನಾಗ್ ದಿ ಲೆಜೆಂಡ್ ಸೇರಿದಂತೆ ಇದುವರೆಗೆ ಹತ್ತು ಕೃತಿಗಳನ್ನು ರಚಿಸಿರುತ್ತಾರೆ. 'ಧೈರ್ಯ ಅಂದರೆ ಏನು' ಇದು ಇವರ ಮೊದಲ ಕೃತಿ. ಈ ಕೃತಿ 2008 ರಲ್ಲಿ ಬಿಡುಗಡೆಗೊಂಡಿತ್ತು. ಗೆಲುವಿಗಾಗಿ ಧ್ಯಾನ, ಚಾಣಕ್ಯ, ನರೇಂದ್ರ ಮೋದಿ, ಫರ್ಸ್ಟ್ ಪೆಗ್ ಇವರು ಬರೆದಿರುವ ಪ್ರಮುಖ ಕೃತಿಗಳು. ಇದರಲ್ಲಿ ಚಾಣಕ್ಯ ಪುಸ್ತಕ ಮೂರು ಬಾರಿ ಮರು ಮುದ್ರಣಗೊಂಡಿದೆ. ಉದಯವಾಣಿ, ಹೊಸ ದಿಗಂತ, ತರಂಗ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನ, ಕಥೆಗಳು ಪ್ರಕಟವಾಗಿವೆ.
ಕೃತಿಗಳು: ಶಂಕರ್ ನಾಗ್ ದಿ ಲೆಜೆಂಡ್, ನಾಥ ಪಂಥ ,ಫರ್ಸ್ಟ್ ಪೆಗ್, ಪೆಗ್ ಬೈ ಪೆಗ್, ಚಾಣಕ್ಯ ,ಧೈರ್ಯ ಅಂದರೆ ,ಧ್ಯಾನ