ಕವಯತ್ರಿ, ಹಾಸ್ಯ ಪ್ರಜ್ಞೆಯುಳ್ಳ ಬರಹಗಾರ್ತಿ ನಾಗರತ್ನ ಬಿ.ಆರ್ ಅವರು 1951 ಡಿಸೆಂಬರ್ 3 ರಂದು ತುಮಕೂರಿನಲ್ಲಿ ಜನಿಸಿದರು. ’ಮತ್ತೆ ಮೂಡಿತು ವಸಂತ, ನೆಲೆ, ಹೊಣೆ’ ಅವರ ಕಥಾ ಸಂಕಲನಗಳಾಗಿವೆ. “ನಾಗ ಸಂಪಿಗೆ” ಅವರ ಪ್ರಮುಖ ಕವನ ಸಂಕಲನ. “ನಾಗೋಲ್ಲಾಸ, ಚುರುಮುರಿ, ಚುಟುಕು ಸಂಕಲನ, ರತ್ನಾ ಶತಕ, ಮೆಲುಕು’ ಅವರ ಹಾಸ್ಯ ಸಂಕಲನಗಳ ಕೃತಿಗಳು. ಬೇಂದ್ರೆ ಸೇವಾ ಪ್ರಶಸ್ತಿ, ಬಿಜಾಪುರ ಕುಮಾರರಾಮ ಪ್ರಶಸ್ತಿ-ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಪ್ರಶಸ್ತಿ, ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ, ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿದ್ದರು.