ರಂಗನಿರ್ದೇಶಕ, ನಾಟಕಕಾರ ಕರಣಂ ಪವನ್ ಪ್ರಸಾದ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವೀಧರರು. ವೃತ್ತಿಯಿಂದ ಬಳಕೆದಾರ ಇಂಟರ್ಫೇಸ್ ಡಿಸೈನರ್ ಆಗಿದ್ದು, ಸಂಶೋಧನೆ, ಸಾಹಿತ್ಯ ಅಧ್ಯಯನ ಬರೆಹ ಇವರ ಹವ್ಯಾಸ. ನಾಟಕಗಳ ರಚನೆ, ನಿರ್ದೇಶನ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ನನ್ನಿ (ಕಾದಂಬರಿ) ಗ್ರಸ್ತ (ಕಾದಂಬರಿ), ಪುರಹರ (ನಾಟಕ), ಕರ್ಮ (ಕಾದಂಬರಿ)