ಈಗಾಗಲೇ ಹದಿನೈದಿಪ್ಪತ್ತು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ಹಿರಿಯ ಲೇಖಕಿ ಇಂದುಮತಿ ಲಮಾಣಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬರಟಗಿಯ ಮೂರನೇ ತಾಂಡದಲ್ಲಿ (1959). ಕೊರಡು ಕೊನರುವುದು ಬರಡು ಹಯನಹುದು, ದಲನ ಎಂಬ ಮಹತ್ವದ ಕಾದಂಬರಿಗಳನ್ನು, ನನ್ನ ಸುತ್ತಿನ ಸತ್ಯಗಳು, ತಾಯಿ ಲೋಕ, ಬಾನ ಚಂದಿರ, ಕಾವ್ಯ ಸಂಕಲನ, ಗೋರ್, ಬಂಜಾರ ಸ್ತ್ರೀಯರ ವಸ್ತ್ರಾಭರಣ ಸಮುಜಾಯದ ಸಾಂಸ್ಕೃತಿಕ ಕೃತಿಗಳು. ಬಂಜಾರಾ ಭೀಷ್ಮ ಎಲ್.ಆರ್.ನಾಯ್ಕ್ ಜೀವನ ಚರಿತ್ರೆ. ಎಟುಝಡ್(ಹಾಸ್ಯ ನಾಟಕ). ಕಬ್ಬಡಿ ಲಲಿತಾ ಪ್ರಬಂಧ. ಶ್ಯಮಂತಕ ಮಣಿ. ಹೀಗೆ ಅನೇಕ ವೈವಿಧ್ಯಮಯ ಕೃತಿಗಳಿಂದ ಬೆರಗು ಮೂಡಿಸಿದ್ದಾರೆ.