ವೀಣಾ ರಾವ್ ಅವರು ಕುಂದಾಪುರ ತಾಲೂಕಿನ ಕಂಬದ ಕೋಣೆ ಗ್ರಾಮದವರು. ಬಿ.ಎ ಪದವಿಧರೇ. 2020ರಲ್ಲಿ ಕೊಡಗು ಜಿಲ್ಲಾ ಸಿರಿಗನ್ನಡ ಮಹಿಳಾ ವೇದಿಕೆಯ ಅಧ್ಯಕ್ಷರಾಗಿದ್ದರು. ಕವನ, ಚುಟುಕು, ಸಣ್ಣಕಥೆ, ಕಾದಂಬರಿ ಪ್ರಕಾರದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕೃತಿಗಳು: ಭಾವ ಸರಿತೆ(ಕವನ ಸಂಕಲನ), ಮಣ್ಣಿನ ಗೋಡೆ(ಕಥಾಸಂಕಲನ), ಮಧುರ ಮುರಳಿ(ಕಾದಂಬರಿ), ಕುರುದ್ವೀಪ(ಕಾದಂಬರಿ)
ಪ್ರಶಸ್ತಿಗಳು: ‘ಮಧುರ ಮುರಳಿ’ ಕಾದಂಬರಿಗೆ 2024ರ ‘ಬಸವ ಪುರಸ್ಕಾರ’ ಮತ್ತು ‘ದಿ. ಮಹದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ ಪ್ರಶಸ್ತಿ