ಲೇಖಕ ಡಾ.ವೆಂಕೋಬರಾವ್ ಎಂ.ಹೊಸಕೋಟೆ ಅವರು ಕನ್ನಡದಲ್ಲಿ ಎಂ.ಎ, ತತ್ವಶಾಸ್ತ್ರದಲ್ಲಿ ಎಂ.ಎ, ಎಂ.ಎಡ್. ಎಂ.ಫಿಲ್ ಶಿಕ್ಷಣ ಸೇರಿದಂತೆ ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿಯನ್ನು ಪಡೆದಿದ್ದಾರೆ. ಸದ್ಯ ರಾಜಾಜಿನಗರದ ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ- ಮುನಿದೇವರಾವ್ ಸಿ, ತಾಯಿ- ಅನುಸೂಯಬಾಯಿ ಎ. ವೃತ್ತಿಯೊಂದಿಗೆ ಸಾಹಿತ್ಯಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಅವರು ತಲ್ಲಣ, ಒಡಲು, ಮತ್ತೆ ಆಮೇಲೆ ಇನ್ನೇನೂ, ಲಾಕ್ ಡೌನ್ ಋತುಮಾನ, ದಯವಿಟ್ಟು ನಂತರ ಪ್ರಯತ್ನಿಸಿ ಎಂಬ ಕಾದಂಬರಿಗಳು. ಮಿಂಚುಳ್ಳಿ, ಬೆಸುಗೆ, ಕಾಣದ ಕಡಲು, ಆಕಾಶದ ನೀಲಿಯಲ್ಲಿ, ಪ್ರೀತಿ ನೀನಿಲ್ಲದ ಮೇಲೆ ಎಂಬ ಕವನ ಸಂಕಲನಗಳು. ಅಂಚು, ಕಪ್ಪುನೆಲ, ಅಸ್ಮಿತೆಯ ಹುಡುಕುತ್ತ ಕಡಲಾಳದ ಮುತ್ತುಗಳು, ಸಾಹಿತ್ಯ ಮತ್ತು ವಿಮರ್ಶೆ ಎಂಬ ವಿಮರ್ಶಾ ಬರಹಗಳು, ಜಾಲಿಮರದ ಹೂವುಗಳು ಸಣ್ಣ ಕಥೆ, ಹಾಗೂ ಅ.ನ.ಕೃಷ್ಣರಾಯರು, ರಾಧೇಯ ಎಂಬ ಸಂಶೋಧನಾ ಬರಹಗಳು ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.