.ಕತೆಗಾರ, ಕವಿ ಮಂಜು ಕೋಡಿಉಗನೆ ಮೂಲತಃ ಚಾಮರಾಜನಗರದವರು. ತಂದೆ ಎಂ. ಚನ್ನಂಜಯ್ಯ, ತಾಯಿ ನಾಗಮ್ಮ. ಕನ್ನಡ ಉಪನ್ಯಾಸಕರಾಗಿ ‘ಸರ್ಕಾರಿ ಪದವಿ ಪೂರ್ವ’ ಕಾಲೇಜುಗಳಲ್ಲಿ ಸೇವೆ. ತಮ್ಮ ನೆಲ ಮೂಲದ ಸಂಸ್ಕೃತಿಯನ್ನು ಚಿತ್ರಿಸುವ ‘ನೆಲದ ಜೀವ’ ಕತಾ ಸಂಕಲನ 2002ರಲ್ಲಿ ಪ್ರಕಟಣೆ ಕಂಡಿತು. ‘ಮಾರಿಕೋಳ’ ಅವರ ಕವನ ಸಂಕಲನ. ‘ಶೂದ್ರ ಸಂವಾದ’, ‘ನಾನು, ಮಲ್ಲಿಗೆ ಮತ್ತು ದೇವರು’, ‘ಬೆಟ್ಟ ಬೇಗೆ’ ಅವರ ಮತ್ತಿತರ ಕೃತಿಗಳು. ‘ಚಪ್ಪೋಡು’ ಅವರ ಇತ್ತಿಚಿನ ಕೃತಿ. ಅಲ್ಲದೆ ಅನುವಾದದಲ್ಲು ತಮ್ಮ ಚಾಪನ್ನು ಮೂಡಿಸಿರುವ ಮಂಜು ಅವರು ಕಬೀರರ ಪದ್ಯಗಳನ್ನು ‘ಕುರುಡಿಗೆ ಬೆಳಕು ನೆಪವಲ್ಲ’ ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಟಕಗಳಲ್ಲು ಅತ್ಯಂತ ಅಸ್ಥೆ ಉಳ್ಳವ ಅವರು ಗ್ರಾಮೀಣ ರಂಗಭೂಮಿಯಲ್ಲಿ ಕುರುಕ್ಷೇತ್ರ ನಾಟಕಕ್ಕೆ ಹಲವಾರು ಬಾರಿ ಬಣ್ಣ ಹಚ್ಚಿದ್ದಾರೆ.