ಲೇಖಕ ಗೌತಮ್ ಬೆಂಗಳೆ ಶಿರಸಿಯ ಬೆಂಗಳೆಯವರು. ಇಂಜಿನೀಯರಿಂಗ್ ಪದವೀಧರರು. ಪ್ರಸ್ತುತ ಆಲ್ಫ್ ಕಾಮರ್ಸ್ ಎಂಬ ಕಂಪನಿಯ ಸಂಸ್ಥಾಪಕ ಸದಸ್ಯರು. ಕಂಪನಿಯಲ್ಲಿ ಪ್ರೋಗ್ರಾಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಯ ಹಸಿರು, ಕೃಷಿಯ ಒಡನಾಟ , ದೇಶ ಸುತ್ತುವುದು, ಪುಸ್ತಕ ಓದುವುದು ಹೆಚ್ಚು ಆಸಕ್ತಿ. 'ಆತ್ಮ ಸಂವೇದನಾ' ಅವರ ಚೊಚ್ಚಲ ಕಾದಂಬರಿ. ಹಾಗೂ 'ಪ್ರತಿವ್ಯೂಹ' ಎರಡನೇ ಕಾದಂಬರಿ.