ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು.
ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ.
ಅವುಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಧಾರವಾಹಿಗಳಾಗಿ ಪ್ರಕಟವಾಗಿವೆ. ಸುಧಾ, ತರಂಗ, ಮಂಗಳ, ಕರ್ಮವೀರ, ಕನ್ನಡಪ್ರಭ, ಉದಯವಾಣಿ, ರಾಗಸಂಗಮ ಪ್ರಿಯಾಂಕ ಹೀಗೆ ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಇವರ ಕಾದಂಬರಿಗಳು ಪ್ರಕಟವಾಗಿವೆ. ಸಿಕ್ಕು, ಪುತ್ರಿ ಕಾಮೇಷ್ಟಿ , ಅಜ್ಞಾತ ಇವರ ಜನಪ್ರಿಯ ಕಾದಂಬರಿಗಳಲ್ಲಿ ಕೆಲವು. ಕನ್ನಡ ಸಾಹಿತ್ಯ ಪರಿಷತ್ತು ಯುವ ಸಾಹಿತಿಗಳಿಗೆ ಏರ್ಪಡಿಸಿದ್ದ ದತ್ತಿನಿಧಿ 2010ರಲ್ಲಿ ಬೇಟೆ ಕಾದಂಬರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅರಳು ಸಾಹಿತ್ಯ ಪ್ರಶಸ್ತಿ, ದೂರ ದಾರಿಯ ತೀರ' ಕಾದಂಬರಿಗೆ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ನೀಡುವ 'ಲೇಖಿಕಾಶ್ರೀ' ಪ್ರಶಸ್ತಿ (2011) ಅಲ್ಲದೆ ಇನ್ನಿತರ ಪ್ರಶಸ್ತಿ ಸಮ್ಮಾನಗಳು ದೊರೆತಿವೆ. ದೃಶ್ಯ ಮಾಧ್ಯಮಕ್ಕೂ ಕಥೆ, ಸಂಭಾಷಣೆ ಬರೆದಿದ್ದಾರೆ.