About the Author

ಕಾದಂಬರಿಕಾರ, ಅಂಕಣಕಾರ, ಅನುವಾದಕ ಗುರುರಾಜ ಕೊಡ್ಕಣಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ ಓದಿದ್ದು ಇಂಜಿನಿಯರಿಂಗ್, ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಹಾಯ್ ಬೆಂಗಳೂರು’ ಮತ್ತು ‘ಹಿಮಾಗ್ನಿ’ ವಾರಪತ್ರಿಕೆಗಳ ಅಂಕಣಕಾರರಾಗಿ ಬರಹದ ಬದುಕು ಆರಂಭಿಸಿದ ಅವರು ನಂತರದಲ್ಲಿ ಕಾದಂಬರಿಕಾರ, ಅನುವಾದಕರಾಗಿ ಗುರುತಿಸಿಕೊಂಡರು. ಉಳಿದಂತೆ ‘ಅಂಕಣಕ್ಕೆ ಅನುವಾದಿತ ಕಥೆಗಳು’ ಎನ್ನುವ ಇಂಗ್ಲಿಷ್ ಸಣ್ಣ ಕತೆಗಳ ಅನುವಾದಿತ ಕಥಾಸಂಕಲನ ಕೂಡ ಪ್ರಕಟವಾಗಿರುತ್ತದೆ. ಅಷ್ಟೇಅಲ್ಲದೆ ಲಘು ಹರಟೆಯ ಶೈಲಿಯ ಬರಹಗಳ ಸಂಕಲನ, ‘ಸವಿ ಸವಿನೆನಪು ಸಾವಿರ ನೆನಪು’ ಎನ್ನುವ ಇ-ಬುಕ್ ಸಹ ಪ್ರಕಟಗೊಂಡಿದೆ. 

ಕೃತಿಗಳು: ಶತಕಂಪಿನೀ, ವಿಕ್ಷಿಪ್ತ, ಪ್ರತಿಜ್ಞೆ, ಅತಿಮಾನುಷ 

 

 

ಗುರುರಾಜ ಕೊಡ್ಕಣಿ, ಯಲ್ಲಾಪುರ