ಎಂ.ವಿ ಷಡಕ್ಷರಿ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿಯವರು. ತಂದೆ ವಿರೂಪಾಕ್ಷಯ್ಯ, ತಾಯಿ ಹೇಮಲತಾ. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಪ್ರೀತಿ ಮತ್ತು ಆಸಕ್ತಿಯನ್ನು ಹೊಂದಿದ್ದು, ಕಳೆದ ಹತ್ತು ವರ್ಷಗಳಿಂದ ತಮ್ಮದೇ ಆದ ಶೈಲಿಯಲ್ಲಿ ಸಾಹಿತ್ಯ ಸೇವೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಜೊತೆಗೆ, ತಮ್ಮ ಸಾಹಿತ್ಯಾಭಿರುಚಿಯಿಂದ ಪ್ರೇರಿತರಾಗಿ “ನಾನು ಮತ್ತು ನಾನು” (ಕವನ ಸಂಕಲನ), “ಮುಂಗಾರು” (ಕವನ ಸಂಕಲನ), “ಶೃಂಗಾರ” (ಭಾವಗೀತೆಗಳ ಸಂಕಲನ), “ಅಂತಿಮ ತೀರ್ಪು” (ಕಾದಂಬರಿ), “ಉದಾಸೀನ” (ಕಥಾ ಸಂಕಲನ), ಹಾಗೂ "ಮೌನ ಮಾತಾದಾಗ” ಎಂಬ ಕೃತಿಗಳನ್ನು ಹೊರತಂದಿದ್ದಾರೆ. ಈವರೆಗೂ ಅವರು 100ಕ್ಕೂ ಹೆಚ್ಚು ಭಾವಗೀತೆಗಳನ್ನು ರಚಿಸಿದ್ದು, ಸುಮಾರು 35ಕ್ಕೂ ಹೆಚ್ಚು ಭಾವಗೀತೆಗಳು ಸಂಯೋಜನೆಗೆ ಒಳಪಟ್ಟಿವೆ. ಖ್ಯಾತ ಸಂಗೀತ ನಿರ್ದೇಶಕರಾದ ರಾಜು ಎಮ್ಮಿಗನೂರು ಮತ್ತು ರಾಘವೇಂದ್ರ ಬೀಜಾಡಿ ಹಾಗೂ ನೀತು ನೀನಾದ್ ಇನ್ನೂ ಹಲವು ಸಂಗೀತ ನಿರ್ದೇಶಕರು ಇವರ ಭಾವಗೀತೆಗಳನ್ನು ಸಂಯೋಜಿಸಿದ್ದಾರೆ.