`ವಿಶ್ವಂಭರ' ನಾ.ಮೊಗಸಾಲೆ ಅವರ ಕಾದಂಬರಿಯಾಗಿದೆ. ಈ ಕಾದಂಬರಿಯು ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಮತ್ತು ಜೀವನ ದರ್ಶನದ ಅಧಿಕೃತ ದಾಖಲೆ ಎನ್ನಬಹುದು. ಇಲ್ಲಿ ಸರಳವಾದ ಭಾಷೆ, ಚಿಕ್ಕ ಚಿಕ್ಕ ವಾಕ್ಯಗಳು ಮತ್ತು ಸಲಿಲವಾಗಿ ಓದಿಸಿಕೊಳ್ಳುವ ಶೈಲಿಯಿದ್ದು, ಈ ವಿಚಾರಗಳು ಮತ್ತಷ್ಟು ಕಾದಂಬರಿಯನ್ನು ಓದುಗರಿಗೆ ಹತ್ತಿರವಾಗಿಸುತ್ತವೆ. ಚೈತನ್ಯರ ದಿವ್ಯಾದ್ಭುತವಾದ, ಲೀಲಾಮಯವಾದ ಕಥನದಿಂದ ಕೃತಿಯು ಮನಮೋಹಕವಾಗಿದೆ. ಶೇಣೀಕೃತ ಸಮಾಜದ ಕೆಳವರ್ಗದ ಜನರಿಗೂ ಕೃಷ್ಣನಾಮ ಸ್ಮರಣೆಯ ಮೂಲಕ ಭಗವಂತನನ್ನು ತಲುಪಬಹುದು ಎಂಬ ಧೈರ್ಯವನ್ನು ತುಂಬಿ ತಮ್ಮ ಅನುಯಾಯಿಗಳನ್ನಾಗಿಸಿಕೊಳ್ಳುತ್ತಾ ಸಾಗಿದ ಚೈತನ್ಯರ ವಿವರಗಳು ಕಾದಂಬರಿಯಲ್ಲಿ ಬಹುಸೂಕ್ಷ್ಮವಾಗಿ ಹೊರಬಂದಿವೆ. ಒಟ್ಟಿನಲ್ಲಿ, ವಿಶ್ವಂಭರ ಕಾದಂಬರಿಯು ಭಕ್ತಿಪಂಥದ ಬಾಗಿಲನ್ನು ಸರ್ವರಿಗೂ ತೆರೆದಿಟ್ಟ ಶ್ರೀ ಕೃಷ್ಣ ಚೈತನ್ಯರ ಜೀವನ ದರ್ಶನವನ್ನು ಮಾಡಿಸುವುದರ ಜೊತೆಗೆ ಅವರ ಬದುಕಿನ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಸಾಹಿತ್ಯಕ ಆಯಾಮಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿದೆ.
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...
READ MORE