ಸಿಂಗಾರೆವ್ವ ಮತ್ತು ಅರಮನೆ

Author : ಚಂದ್ರಶೇಖರ ಕಂಬಾರ

Pages 200

₹ 130.00




Year of Publication: 1982
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

’ಸಿಂಗಾರೆವ್ವ ಮತ್ತು ಅರಮನೆ’ ಚಂದ್ರಶೇಖರ ಕಂಬಾರ ಅವರ ಜನಪ್ರಿಯ ಕಾದಂಬರಿ. ಗ್ರಾಮೀಣ ಪ್ರದೇಶದ ದೇಸಗತಿ ಮನೆತನದಲ್ಲಿ ನಡೆಯುವ ಘಟನೆಗಳನ್ನು ಈ ಕಾದಂಬರಿ ಚಿತ್ರಿಸುತ್ತದೆ. ಕಾದಂಬರಿಯ ನಿರೂಪಕ ಸಿಂಗಾರೆವ್ವನಿಗೆ ಜೊತೆಗಾತಿಯಾಗಿದ್ದ ಶೀನಿಂಗವ್ವಳಿಂದ ಮಾಹಿತಿ ಪಡೆಯುವ ಮೂಲಕ ಆರಂಭವಾಗುವ ಕಾದಂಬರಿಯು ಕುತೂಹಲ ಕೆರಳಿಸುತ್ತ ಹೋಗುತ್ತದೆ. ಮನುಷ್ಯನ ಸಣ್ಣತನ, ಸ್ವಾರ್ಥದ ಅನಾವರಣ ಆಗುವುದರ ಜೊತೆಗೆ ಸಿಂಗಾರೆವ್ವನ ಜೀವನ ಪ್ರೀತಿ ಮತ್ತು ಬದುಕು ಕಟ್ಟಿಕೊಳ್ಳುವ ರೀತಿ ಅನನ್ಯ ಪಾತ್ರ ಸೃಷ್ಟಿಗೆ ಕಾರಣವಾಗಿದೆ. ಕೆಲಸದ ಆಳು ಮರ್‍ಯಾ, ನಾಟಕದ ಹುಚ್ಚಿನ ದೇಸಾಯಿ ಪಾತ್ರಗಳು ಗಮನ ಸೆಳೆಯುತ್ತವೆ. ಘಟನೆಗಳು ಒಂದಾದರಂತೆ ಬಿಚ್ಚಿಡುತ್ತ ಹೋಗುವ ಕಂಬಾರರು ಸೊಗಸಾದ ಕಾದಂಬರಿಯ ಓದಿಗೆ ಅನುವು ಮಾಡಿಕೊಡುತ್ತಾರೆ. ಚಿತ್ರವತ್ತಾಗಿ ಕಟ್ಟುವ ಕ್ರಮ ಪ್ರಿಯವಾಗದೇ ಇರದು.

ಮಲೆಯಾಳಂ ಭಾಷೆಗೆ ಅನುವಾದಗೊಂಡು ಪ್ರಕಟಗೊಂಡಿದ್ದ ಸಿಂಗಾರೆವ್ವ ಅಲ್ಲಿಯೂ ಚರ್ಚೆಗೆ ಅನುವು ಮಾಡಿಕೊಟ್ಟಿತ್ತು.

 

“ಸಿಂಗಾರೆವ್ವ ಅತ್ಯಂತ ದೊಡ್ಡ ಫೆಮಿನಿಸ್ಟ್ ಅಲ್ಲವೆ?” ಎಂಬ ಅಪ್ಪುಕುಟ್ಟನ್ ಪ್ರಶ್ನೆಗೆ ಯಾರಾದರೂ ತಲೆದೂಗಲೇಬೇಕು. ತಾರಾಶಂಕರ ಬ್ಯಾನರ್ಜಿಯವರ 'ಆರೋಗ್ಯ ನಿಕೇತನ' ದಂತೆ, ಶಿವರಾಮ ಕಾರಂತರ 'ಮರಳಿ ಮಣ್ಣಿಗೆ'ಯಂತೆ, ವಿಕ್ಟರ್‌ ಹೊಗೋವಿನ 'ಬಡವರು', ಟಾಲ್ ಸ್ಟಾಯ್ ಅವರ 'ಯುದ್ಧ ಮತ್ತು ಶಾಂತಿ' ಯಂತೆ ಅನುವಾದಗಳ ಮೂಲಕ ಮಲೆಯಾಳಂಗೆ ಬಂದ ಕಾದಂಬರಿ ರತ್ನಗಳೊಂದಿಗೆ 'ಸಿಂಗಾರವ್ವ ಮತ್ತು ಅರಮನೆ' ಯೂ ಸೇರುತ್ತದೆ. ಕಾದಂಬರಿಕಾರರ ರಚನಾಕೌಶಲದೊಂದಿಗೆ ಕವಿಯ ಒಳನೋಟಗಳೂ ಸಮಾಜಶಾಸ್ತ್ರಜ್ಞನ ಸೂಕ್ಷ್ಮತೆಯೂ ಈ ಕಾದಂಬರಿಯಲ್ಲಿ ಮೇಲೈಸಿವೆ. ಯಾರೂ ಪ್ರವೇಶಿಸದ ಒಂದು ಲೋಕಕ್ಕೆ ಓದುಗರನ್ನು ಕರೆದೊಯ್ಯುವುದೇ ಅಲ್ಲದೆ ಅಲ್ಲಿ ಅಪರಿಚಿತವಾದ ಒಂದು ಬದುಕಿನ ಅದ್ಭುತ ದರ್ಶನವನ್ನೂ ಮಾಡಿಸುತ್ತದೆ’ ಎಂದು ಕೆ.ಎಂ. ಅಹಮ್ಮದ್ ವಿವರಿಸಿದ್ದಾರೆ.

ಎಂ.ಕೆ. ಪ್ರೇಮಾನಂದ ಅವರು ’ದುರಂತಗಳು ಬೇಟೆಯಾಡಿ ಹೊಮ್ಮಿಸಿದ ಕಣ್ಣೀರಲ್ಲಿ ಮುಳುಗಿದ ಆ ನಿಷ್ಕಳಂಕ ಸ್ತ್ರೀಜನ್ಮವನ್ನು ಕುರಿತು ಪ್ರೀತಿಯ ಶೀನಿಂಗವ್ವ ಹೇಳುವುದನ್ನು ಕೇಳಿಸಿಕೊಳ್ಳಲು ಕುತೂಹಲವಿತ್ತು, ರಹಸ್ಯಗಳು ತುಂಬಿದ ಅರಮನೆ, ಹುಣಿಸೆ ಮರಗಳ ಕಾಡು, ವಿಚಿತ್ರವಾದ ಆಚರಣೆಗಳೆಲ್ಲ ಸೇರಿ ಮನಸ್ಸನ್ನು ತುಂಬಿ ನಿಂತಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books