‘ಸಂಧಿಕಾಲ’ ಲೇಖಕಿ ವಸುಮತಿ ಉಡುಪ ಅವರ ಕಾದಂಬರಿ. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಕಾದಂಬರಿ ನಿಮ್ಮೆದುರಿನಲ್ಲಿದೆ. ಮಧುರವಾಗಿರಬೇಕಾದ ಸಂಬಂಧಗಳು ಸಣ್ಣದೊಂದು ಕಾರಣದಿಂದ ಹಳಸಿಹೋಗಿ ಬದುಕು ಮೂರಾಬಟ್ಟೆಯಾಗುವ ಕುರಿತು ಅನೇಕ ಉದಾಹರಣೆಗಳು ಸಮಾಜದಲ್ಲಿವೆ. ಸಂಬಂಧ ಕಿಲುಬುಗಟ್ಟಲು ದೊಡ್ಡ ಕಾರಣವೇ ಬೇಕೆಂದೇನಿಲ್ಲ.
ಹಿತ್ತಾಳೆಕಿವಿಯ ಪರಿಣಾಮ, ಮುಕ್ತ ಸಂವಹನದ ಕೊರತೆ, ತಪ್ಪು ತಿಳುವಳಿಕೆ ಪ್ರತಿಷ್ಠೆಯ ಫಲಶ್ರುತಿ, ಆತ್ಮೀಯವಾಗಿರಬೇಕಾದ ಸಂಬಂಧಗಳಲ್ಲಿ ಬಿರುಕು ಮೂಡಲು ಕಾರಣಗಳು ನೂರಾರು. ಪತಿ, ಪತ್ನಿಯರ ಸಂಬಂಧದ ನಡುವೆ ಕಿಲುಬುಗಟ್ಟಿದರೆ ಪರಿಣಾಮ ಏನಾದೀತು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದ ಸುಖಸಂಸಾರವೊಂದು ಹೇಗೆ ಕೈಯಾರೆ ನರಕ ಸೃಷ್ಟಿಸಿಕೊಂಡಿತು.ಈ ಹಿನ್ನೆಲೆಯ ಕಾರಣಗಳೇನು ಎನ್ನುವ ಕುರಿತು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ. ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ...
READ MORE