ಚಿತ್ರದುರ್ಗದ ಪ್ರಪ್ರಥಮ ಪಾಳೇಗಾರ, ಪ್ರಥಮ ನಾಯಕ, ಚಿತ್ರದುರ್ಗವನ್ನು ಆಳಿದ ತಿಮ್ಮಣ್ಣ ನಾಯಕನ ವ್ಯಕ್ತಿತ್ವವನ್ನು ಸಮಗ್ರವಾಗಿ ಕಾದಂಬರಿಯಲ್ಲಿ ಕಟ್ಟಿಕೊಡಲಾಗಿದೆ. ಪರಾಕ್ರಮ, ಸಮರ ಚಾತುರ್ಯ, ದಿಟ್ಟ ನಿರ್ಧಾರ, ಪ್ರಜಾಪ್ರೇಮ, ನಾಡಿನ ನೆಲ ಜಲದ ಮೇಲಿನ ಅಪಾರ ಅಭಿಮಾನ ಹೊಂದಿದ್ದ ತಿಮ್ಮಣ್ಣ ನಾಯಕನ ಸ್ವಾಭಿಮಾನದ ಬದುಕು ಇಲ್ಲಿ ಎಳೆಎಳೆಯಾಗಿ ಇಲ್ಲಿ ವಿವರಿಸಲಾಗಿದೆ. ಜೀವನದಲ್ಲಿ ಎದುರಾಗುವ ಕಡುಕಷ್ಟಗಳಿಗೆ ಬಂಡೆಗಲ್ಲಾಗುವ ತಿಮ್ಮಣ್ಣ ನಾಯಕನ ಅಂತರಂಗದಲ್ಲಿ ತಿಮ್ಮವ್ವ ನಾಗತಿ ಪ್ರೇಮದ ಅಲೆಗಳನ್ನು ಎಬ್ಬಿಸುತ್ತಾಳೆ.
ಆದರೆ, ತಿಮ್ಮಣ್ಣನ ಭಾವುಕತೆಯನ್ನು ಅರ್ಥಮಾಡಿಕೊಳ್ಳದ ನಾಗತಿ, ಅಂತಸ್ತು ಮತ್ತು ಶಿಸ್ತಿನ ಜೀವನಕ್ಕೆ ಮೊರೆ ಹೋಗುತ್ತಾಳೆ. ತನ್ನ ಭಾವುಕ ಪ್ರೀತಿಯನ್ನು ರಂಗುವಿನಲ್ಲಿ ಕಂಡುಕೊಳ್ಳುವ ತಿಮ್ಮಣ್ಣ ಮತ್ತೊಂದೆಡೆ ದುರ್ಗದ ಮೇಲಿನ ಗಾಢಪ್ರೇಮಕ್ಕಾಗಿ ತನ್ನನ್ನೇ ಒಪ್ಪಿಸಿಕೊಳ್ಳುತ್ತಾನೆ. ಮುಕ್ಕಾಗದ ತಿಮ್ಮಣ್ಣನ ಸ್ವಾಭಿಮಾನ ದುರ್ಗದ ಜನರ ಪಾಲಿಗೆ ಹೆಮ್ಮೆಯಾಗಿ ರೂಪುಗೊಳ್ಳುವ ಬಗೆಯನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...
READ MORE