‘ಪ್ರೇಮಪರ್ವತ ’ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ರಮ್ಯ ಮತ್ತು ಮನೋಹರ್ ಬಾಲ್ಯ ಸ್ನೇಹಿತರು. ಅವರ ವಿಧ್ಯಾಭ್ಯಾಸದ ನಂತರ ಮದುವೆ ಎಂದು ಇಬ್ಬರ ಮನೆಯಲ್ಲೂ ನಿಷ್ಕರ್ಷೆಯಾಗಿದ್ದಾಗ ರಮ್ಯ ಸೋದರ ಮಾವ ಶಿವು ಆಗಮನವಾಗುತ್ತದೆ. ಶಿವು ರಮ್ಯಳ ಮೇಲೆ ಆಗಾಧವಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾನೆ. ತನ್ನ ತಾಯಿಯ ನಿಧನದ ನಂತರ ತುಂಬಾ ಬದಲಾದ ಮನೋಹರನನ್ನು ಅರ್ಥ ಮಾಡಿಕೊಳ್ಳಲಾರದೇ ರಮ್ಯ ನೋವಿನಿಂದ ಭಾವಿಗೆ ಹಾರಿಕೊಂಡಾಗ ಶಿವು ಅವಳನ್ನು ರಕ್ಷಿಸುತ್ತಾನೆ. ಇತ್ತ ಕಾಹಿಲೆ ಬಿದ್ದ ರಮ್ಯಳ ತಾಯಿ ರಮ್ಯಳ ಮದುವೆಯನ್ನು ಶಿವು ಜೊತೆಗೇ ಮಾಡಬೇಕು ಎನ್ನುತ್ತಾಳೆ. ತಾಯಿಯ ಸಲುವಾಗಿ ಪರಿಸ್ಥಿತಿಯ ಪ್ರಭಾವದಿಂದ ರಮ್ಯ ಸೋದರ ಮಾವ ಶಿವುನ ಮದುವೆಯಾಗುವುದು ಅನಿವಾರ್ಯವಾಗುತ್ತದೆ. ಇತ್ತ ಮನೋಹರ ಬೇರೆ ಹುಡುಗಿಯೊಂದಿಗೆ ಮದುವೆಯಾದಾಗ ರಮ್ಯ ಖಿನ್ನತೆಗೆ ಜಾರುತ್ತಾಳೆ. ಜೀವನದಲ್ಲಿ ಬರುವ ಕೆಲವು ಕಟು ಸತ್ಯಗಳನ್ನು ಒಪ್ಪಿಕೊಂಡು ಬದುಕನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ವಿವರಿಸುವ ಕಾದಂಬರಿ ಪ್ರೇಮಪರ್ವತ.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE