ಶ್ರೀರಂಗರು ಬರೆದ ಕಾದಂಬರಿ-ಪ್ರಕೃತಿ. ಸೃಷ್ಟಿಯಲ್ಲಿ ಪ್ರಕೃತಿ ಹಾಗೂ ಪುರುಷನಿಗೆ ಸಂಬಂಧ ಕಾಣಬಹುದು. ಆದರೆ, ಪುರುಷ ತತ್ವದ ವಿಚಾರವಾಗಿ ಮಾತ್ರ ಕಾದಂಬರಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ ಎಂದು ಸ್ವತಃ ಲೇಖಕರೇ ಸ್ಪಷ್ಟಪಡಿಸಿದ್ದಾರೆ. ಮಾನವನು ಪರಿಸ್ಥಿತಿಯ ಕೂಸು. ಪರಿಸ್ಥಿತಿ ಬದಲಾದಂತೆ ಅವರ ಸ್ವಭಾವ ಹಾಗೂ ಸಮಾಜ ಎರಡೂ ಬದಲಾಗುತ್ತವೆ. ಅಹುದೆ? ಈ ಮಾತು ಸಿದ್ಧಾಂತವೆ? ಇದನ್ನು ತಿಳಿಯುವ ಯತ್ನವೇ ಈ ಕಾದಂಬರಿ ಎಂದೂ ಹೇಳಿದ್ದಾರೆ.
ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...
READ MORE