ಗಳಗನಾಥ ಸುರಸಗ್ರಂಥ ಮಾಲೆಯಡಿ ಪ್ರಕಟಿತ ಕೃತಿ-ಪ್ರಬುದ್ಧ ಪದ್ಮನಯನೆ. ಗಳಗನಾಥರು ಬರೆದಿದ್ದಾರೆ. ಈ ಕೃತಿಯು 5ನೇ ಆವೃತ್ತಿಯಾಗಿದೆ. ಕನೋಜ ರಾಜ್ಯದ ವೀರವರ್ಮ, ಪದ್ಮನಯನೆ, ವಿಕ್ರಮಾರ್ಕ, ಕಮಲಾಕ್ಷ ಇವರ ರಾಜ್ಯಾಡಳಿತ, ಯುದ್ಧ-ಆಕ್ರಮಣಗಳು, ದೌರ್ಜನ್ಯ, ದುರದೃಷ್ಟ ಹೀಗೆ ವಿವಿಧ ಅಧ್ಯಾಯಗಳಡಿ ಕಾದಂಬರಿಯು ತನ್ನ ವಸ್ತುವನ್ನು ಕುತೂಹಲಕಾರಿಯಾಗಿ ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತದೆ.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE