’ಕುಸುಮಾಕರ ದೇವರಗೆಣ್ಣೂರು’ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಅನಂತ ದಿವಾಣಜಿ ಅವರ ಕಾದಂಬರಿ. ಅವರ ’ನಾಲ್ಕನೇ ಆಯಾಮ’ ಬಹುಚರ್ಚಿತ ಕಾದಂಬರಿ. ನವ್ಯ ಸಾಹಿತ್ಯ ಪ್ರಮುಖ ಕಾದಂಬರಿಗಳಲ್ಲಿ ಒಂದು ಎಂದು ’ನಾಲ್ಕನೇ ಆಯಾಮ’ವನ್ನು ಗುರುತಿಸಲಾಗುತ್ತದೆ. ಆದರೆ, ಅದನ್ನು ಬರೆದ ಕುಸುಮಾಕರ ಅವರು ಮಾತ್ರ ಹೆಚ್ಚು ಚರ್ಚೆಗೆ ಬರಲಿಲ್ಲ. ಅವರ ಉಳಿದ ಕೃತಿಗಳು ಕೂಡ. ’ನಿರೀಂದ್ರಿಯ’ದಂತಹ ವಿಭಿನ್ನ ಕಾದಂಬರಿ ನೀಡಿದ ಕುಸುಮಾಕರ ಅವರು ’ಪರಿಘ’ದಲ್ಲಿಯೂ ತಮ್ಮ ಛಾಪು ಬಿಟ್ಟುಕೊಟ್ಟಿಲ್ಲ. ಓದಿನ ಖುಷಿಗೆ ಇಂಬು ನೀಡುವ ಕಾದಂಬರಿಯಿದು.
ಕನ್ನಡದ ವಿಶಿಷ್ಟ ಕಾದಂಬರಿಕಾರ ಕುಸುಮಾಕರ ದೇವರಗೆಣ್ಣೂರ ಅವರ ಮೂಲ ಹೆಸರು ವಸಂತ ಅನಂತ ದಿವಾಣಜಿ. ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಸಂತ ಅನಂತ ದಿವಾಣಜಿ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ, ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. 1956ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 35 ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕನ್ನಡದ ಕವಿ ದಾ.ರಾ.ಬೇಂದ್ರೆ ಅವರ ನಿಕಟ ಸಂಪರ್ಕ ವಸಂತ ದಿವಾಣಜಿ ಅವರಿಗೆ ಸುಮಾರು 12 ವರ್ಷಗಳ ಕಾಲ ಸೊಲ್ಲಾಪುರದಲ್ಲಿ ಸಿಕ್ಕಿತ್ತು. ಸೊಲ್ಲಾಪುರಕ್ಕೆ ...
READ MORE