ಪರಂಪರೆ

Author : ಆರ್‍ಯಾಂಬ ಪಟ್ಟಾಭಿ

Pages 111

₹ 69.00




Year of Publication: 1965
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Synopsys

ಕನ್ನಡ ಸಾಹಿತ್ಯ, ಸಂಸ್ಕೃತಿ ಪ್ರತಿಬಿಂಬದಂತಿರುವ ವಿಶ್ವ ಕನ್ನಡ ಸಮ್ಮೇಳನ ಮೈಸೂರಿನಲ್ಲಿ 1985 ಡಿಸೆಂಬರ್ ನಲ್ಲಿ ನಡೆದಿದ್ದು, ಈ ವೇಳೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೆಲವು ಪುಸ್ತಕಗಳನ್ನು ಪ್ರಕಟಿಸಿತು. ಅವುಗಳಲ್ಲಿ ’ಪರಂಪರೆ’ ಕಾದಂಬರಿಯೂ ಪ್ರಕಟಗೊಂಡಿತು. ಹತ್ತೊಂಭತ್ತನೇಯ ಶತಮಾನದ ಅಂತ್ಯದಲ್ಲಿ ಜನಿಸಿ ವಕೀಲರಾಗಿ ’ರಾಯರು’ ಎಂದೇ ತಮ್ಮ ಉದಾತ್ತ ಬದುಕು, ಸೇವೆ ಸಾಧನೆಗಳಿಂದ ಖ್ಯಾತರಾಗಿದ್ದ ಆರ್ಯಾಂಬ ಪಟ್ಟಾಭಿ ಅವರ ತಾತ ಶ್ರೀ ನರಸಿಂಹರಾವ್ ಈ ಕಾದಂಬರಿಯ ಕೇಂದ್ರ ಬಿಂದು. ಸಮಾಜ ಸೇವಕರಾಗಿ ಕಾಯಾ, ವಾಚಾ, ಮನಸಾ ದುಡಿದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರಿಂದ ’ರಾಜಸೇವಾಸಕ್ತ’ ಪ್ರಶಸ್ತಿಯನ್ನು ಪಡೆದುಕೊಂಡರು. ಮಂಡ್ಯ ಜಿಲ್ಲೆಯಲ್ಲಿ ಮಳೆಯಾಗದೆ ರೈತರು, ವ್ಯಾಪಾರೋದ್ಯಮಿಗಳು ಸಾಲ ಮಾಡಬೇಕಾದ ಪರಿಸ್ಥಿತಿಗೆ ಸಿಕ್ಕಿ ಬೀಳುತ್ತಿದ್ದರು. ಶ್ರೀಮಂತರಿಂದ, ಜಮೀನುದಾರರಿಂದ ಅತಿ ಹೆಚ್ಚಿನ ಬಡ್ಡಿ ತೆತ್ತು ಸಾಲ ಪಡೆಯುತ್ತಿದ್ದರು. ಬಡ್ಡಿ, ಅಸಲು ತೀರಿಸಲಾಗದೆ ಭೂಮಿಯನ್ನೇ ಕಳೆದುಕೊಳ್ಳುತ್ತಿದ್ದರು. ನರಸಿಂಹರಾಯರು ಬಡಜನರ ಅನುಕೂಲಕ್ಕಾಗಿ ಶ್ರೀರಂಗಪಟ್ಟಣದಲ್ಲಿದ್ದ ತಮ್ಮ ಸ್ವಂತ ಮನೆಯಲ್ಲೇ ’ಶ್ರೀ ಕೃಷ್ಣ ರಾಜೇಂದ್ರ ಸಹಕಾರ ಸಂಘ’ ಸ್ಥಾಪಿಸಿದರು.ಇಂತಹ ಅನೇಕ ವಿಚಾರಗಳನ್ನು ಈ ಕಾದಂಬರಿ ಒಳಗೊಂಡಿದೆ.

About the Author

ಆರ್‍ಯಾಂಬ ಪಟ್ಟಾಭಿ
(12 March 1936)

ಕಾದಂಬರಿಗಾರ್ತಿ ಆರ್‍ಯಾಂಬ ಪಟ್ಟಾಭಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. 1936 ಮಾರ್ಚ್‌ 12 ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಕೃಷ್ಣಸ್ವಾಮಿ, ತಾಯಿ ತಂಗಮ್ಮ. ’ಹೊಂಗನಸು, ಆರಾಧನೆ, ಸವತಿಯ ನೆರಳು, ಕಪ್ಪು-ಬಿಳುಪು, ನನ್ನವಳು’ ಅವರ ಕಥಾಸಂಕಲನಗಳು. ’ಅನುರಾಗ’, ನರಭಿಕ್ಷುಕ ಕಾದಂಬರಿಗಳನ್ನುಹಾಗೂ ಮಕ್ಕಳ ಮತ್ತು ಕ್ರೀಡೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 'ಟೆನ್ನಿಸ್'’ ಕೃತಿಗೆ ಮಲ್ಲಿಕಾ ಪ್ರಶಸ್ತಿ, ಬಿ. ಸರೋಜದೇವಿ ಶ್ರೀಹರ್ಷ ಪ್ರಶಸ್ತಿ ಸಂದಿವೆ. ...

READ MORE

Related Books