ನವಮನ್ವಂತರ

Author : ಅಮು ಭಾವಜೀವಿ (ಅಪ್ಪಾಜಿ ಎ. ಮುಸ್ಟೂರು)

Pages 268

₹ 150.00




Year of Publication: 2014
Published by: ಗೀತಾಕುಟೀರ
Address: ಬೆಂಗಳೂರು - 560078

Synopsys

‘ನವಮನ್ವಂತರ’ ಕೃತಿಯು ಭಾವಜೀವಿ ಅವರ ವೈಚಾರಿಕ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ವಿಚಾರಗಳು ಹೀಗಿವೆ; ಹಿಂದುಗಳ ಜನಜೀವನದಲ್ಲಿ ಅತ್ಯಂತ ಆಳವಾಗಿ ಬೇರೂರಿ ನೂರಾರು ಜಾತಿಗಳು, ಅಸ್ಪಶ್ಯತೆಯ ಹೆಸರಿನಲ್ಲಿ ಟಿಸಿಲೊಡೆದು ಜನರ ಬದುಕಿಗೆ ಮಾರಕವಾಗಿದೆ. ಇದಕ್ಕೆ ೫ ಸಾವಿರ ವರುಷಗಳ ಅಂತ್ರ ಇದ್ದು ಇದನ್ನು ಹೋಗಲಾಡಿಸಿ, ಮೇಲುಕೀಳಿಲ್ಲದ ಒಂದು ಸಮಾಜವನ್ನು ಕಟ್ಟುವುದು ಹೇಗೆ ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ. ಸಮಾಜದಲ್ಲಿ ಜಾತಿಯ ಹೆಸರುಗಳಲ್ಲಿ ಒಡೆದುಹೋಗಿರುವ ಜನರ ಮಧ್ಯೆಯೂ ಬದುಕಿನ ಆಶಾಕಿರಣಗಳಂತೆ ಎಲ್ಲ ಜಾತಿಗಳಲ್ಲೂ ವೈಚಾರಿಕ ಪಜ್ಜೆಯುಳ್ಳ ಒಳ್ಳೆಯ ಜನರಿದ್ದಾರೆ ಎಂಬುದನ್ನು ಕೆಲವು ಪಾತ್ರಗಳ ಮೂಲಕ ನವಮನ್ವಂತರ ವೈಚಾರಿಕ ಕಾದಂಬರಿಯನ್ನು ಬರೆಯಲಾಗಿದೆ.

ಸಮಾಜದಲ್ಲಿ ಬಡತನಕ್ಕಿಂತ ಮೌಡ್ಯವೇ ಮಾನವನ ನೆಮ್ಮದಿಗೆ ಮಾರಕ ಎನ್ನುವ ಲೇಖಕ ಶ್ರೀ ಎ. ಆರ್. ರಾಯಣಘಟ್ಟ ಅವರು ಇಂದಿಗೂ ಮಹಾತ್ಮ ಗಾಂಧೀಜಿ ಮತ್ತು ಕುವೆಂಪು ಅವರ ತತ್ವಗಳನ್ನು ಸಮಾಜದಲ್ಲಿ ಬಿತ್ತುವ ಕನಸು ಕಾಣುತ್ತಿರುವ ಆಪೂರ್ವ ಭಾವಜೀವಿ. ಇವರು ತಮ್ಮ ಇಡೀ ಜೀವನದ ಉದ್ದಕ್ಕೂ ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧಗಳು ಮತ್ತು ವೈಚಾರಿಕ ಕೃತಿಗಳ ಮೂಲಕ ಜನರಲ್ಲಿ ನವಸಮಾಜದ ಪ್ರಶ್ನೆಯನ್ನು ಮೂಡಿಸುತ್ತಾ, ಅದಕ್ಕೆ ಸಂಬಂಧಪಟ್ಟ ಸರಿ ಕೃತಿಗಳನ್ನು ರಚಿಸಿರುವುದು ಅವರಲ್ಲಿನ ಕಂಕಣಬದ್ಧತೆಯನ್ನು ತೋರಿಸುತ್ತದೆ.

About the Author

ಅಮು ಭಾವಜೀವಿ (ಅಪ್ಪಾಜಿ ಎ. ಮುಸ್ಟೂರು)
(01 July 1978)

ಅಮು ಭಾವಜೀವಿ (ಅಪ್ಪಾಜಿ ಎ. ಮುಸ್ಟೂರು) ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನವರು. ವೃತ್ತಿಯಿಂದ ಶಿಕ್ಷಕರು.”ಒಡಲಿಗ್ಹತ್ತಿದ ಕಿಚ್ಚು’ ಇವರ ಮೊದಲ ಕವನ ಸಂಕಲನ. ...

READ MORE

Reviews

(ಹೊಸತು, ಮೇ 2015, ಪುಸ್ತಕದ ಪರಿಚಯ)

ಪುರುಷಸೂಕ್ತದಲ್ಲಿ ಅಂಕುರವಾದ ಚಾತುರ್ವಣ್ಯ್ರ ವ್ಯವಸ್ಥೆ, ಸ್ಮೃತಿಗಳ ಮೂಲಕ ಗಾಢವಾಗಿ ಬೆಳೆದು ಹಿಂದುಗಳ ಜನಜೀವನದಲ್ಲಿ ಅತ್ಯಂತ ಆಳವಾಗಿ ಬೇರೂರಿ ನೂರಾರು ಜಾತಿಗಳು, ಅಸ್ಪಶ್ಯತೆಯ ಹೆಸರಿನಲ್ಲಿ ಟಿಸಿಲೊಡೆದು ಜನರ ಬದುಕಿಗೆ ಮಾರಕವಾಗಿದೆ. ಇದಕ್ಕೆ ೫ ಸಾವಿರ ವರುಷಗಳ ಅಂತ್ರ ಇದ್ದು ಇದನ್ನು ಹೋಗಲಾಡಿಸಿ, ಮೇಲುಕೀಳಿಲ್ಲದ ಒಂದು ಸಮಾಜವನ್ನು ಕಟ್ಟುವುದು ಹೇಗೆ ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ. ಸಮಾಜದಲ್ಲಿ ಜಾತಿಯ ಹೆಸರುಗಳಲ್ಲಿ ಒಡೆದುಹೋಗಿರುವ ಜನರ ಮಧ್ಯೆಯೂ ಬದುಕಿನ ಆಶಾಕಿರಣಗಳಂತೆ ಎಲ್ಲ ಜಾತಿಗಳಲ್ಲೂ ವೈಚಾರಿಕ ಪಜ್ಜೆಯುಳ್ಳ ಒಳ್ಳೆಯ ಜನರಿದ್ದಾರೆ ಎಂಬುದನ್ನು ಕೆಲವು ಪಾತ್ರಗಳ ಮೂಲಕ ನವಮನ್ವಂತರ ವೈಚಾರಿಕ ಕಾದಂಬರಿಯನ್ನು ಬರೆಯ ಲಾಗಿದೆ. ಸಮಾಜದಲ್ಲಿ ಬಡತನಕ್ಕಿಂತ ಮೌಡ್ಯವೇ ಮಾನವನ ನೆಮ್ಮದಿಗೆ ಮಾರಕ ಎನ್ನುವ ಲೇಖಕ ಶ್ರೀ ಎ. ಆರ್. ರಾಯಣಘಟ್ಟ ಅವರು ಇಂದಿಗೂ ಮಹಾತ್ಮ ಗಾಂಧೀಜಿ ಮತ್ತು ಕುವೆಂಪು ಅವರ ತತ್ವಗಳನ್ನು ಸಮಾಜದಲ್ಲಿ ಬಿತ್ತುವ ಕನಸು ಕಾಣುತ್ತಿರುವ ಆಪೂರ್ವ ಭಾವಜೀವಿ. ಇವರು ತಮ್ಮ ಇಡೀ ಜೀವನದ ಉದ್ದಕ್ಕೂ ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧಗಳು ಮತ್ತು ವೈಚಾರಿಕ ಕೃತಿಗಳ ಮೂಲಕ ಜನರಲ್ಲಿ ನವಸಮಾಜದ ಪ್ರಶ್ನೆಯನ್ನು ಮೂಡಿಸುತ್ತಾ, ಅದಕ್ಕೆ ಸಂಬಂಧಪಟ್ಟ ಸರಿ ಕೃತಿಗಳನ್ನು ರಚಿಸಿರುವುದು ಅವರಲ್ಲಿನ ಕಂಕಣಬದ್ಧತೆಯನ್ನು ತೋರಿಸುತ್ತದೆ.

Related Books