ಕೇವಲ ಪೌರಾಣಿಕ ಪುರುಷರಾಗಿ, ಪುರಾಣ ಗ್ರಂಥಗಳಲ್ಲಿ ಕಾವ್ಯರೂಪದಲ್ಲಿರುವ ಶರಣಬಸವೇಶ್ವರರ ದಿವ್ಯಗಾಥೆಯ ಕಾದಂಬರಿ ರೂಪ ‘ಮಹಾಮನೆ’. ದಾಸೋಹ ಜೀವಿಗಳು, ಭಕ್ತಿಭಂಡಾರಿ, ಕರುಣಾ ಪತಿತ ಪಾವನರು, ದೀನಮುಖಿಗಳ ಉದ್ದಾರಕರು ಆದ ಶರಣ ಬಸವೇಶ್ವರರ ಜೀವನ ಚರಿತ್ರೆಯನ್ನು ಚಿತ್ರಿಸಿದ ಕಾದಂಬರಿ ಇದು. ಘಟನೆ -ಸನ್ನಿವೇಶಗಳ ಸರಣಿ, ಕಥೆಯ ನಿರೂಪಣೆ, ಪಾತ್ರಗಳ ಯೋಜನೆ ಎಲ್ಲವೂ ಕಾದಂಬರಿಯ ಗಟ್ಟಿತನಕ್ಕೆ ಪ್ರಮುಖ ಅಂಶಗಳಾಗಿವೆ.
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE