‘ಜಂಬೋ ಐಲ್ಯಾಂಡ್’ ಕೃತಿಯು ಎ. ಹರೀಶ್ ಕುಮಾರ್ ಅವರ ದಂತ ಕತೆ ಆಧಾರಿತ ಕಾದಂಬರಿಯಾಗಿದೆ. ಒಬ್ಬ ಸಾಮಾನ್ಯ ಕಂಠದ ಪಿಟೀಲುವಾದಕ ಯುವಕನನ್ನು ಪ್ರೀತಿಸುವ ರಾಜಕುಮಾರಿ. ಪ್ರತಿಷ್ಠೆಯ ಹೆಸರಲ್ಲಿ ಪ್ರೇಮಿಗಳನ್ನು ಕೊಲ್ಲಿಸುವ ಮಹಾರಾಜ. ನೂರ ಐವತ್ತು ವರ್ಷಗಳ ನಂತರ ಮನುಷ್ಯ ಜನ್ಮ ಪಡೆದ ಪ್ರೇಮಿ. ತನ್ನ ಪ್ರೇಮಿಯನ್ನು ಸೇರಲೇಬೇಕೆಂದು ಬರುವ ರಾಜಕುಮಾರಿಯ ಆತ್ಮ. ತನ್ನ ಸಾವಿಗೆ ಪರಿತಪಿಸುವ ಬದಲು ತನಗೆ ಸಿಕ್ಕಿದ ಪ್ರೇತದ ರೂಪವನ್ನೇ ಎಂಜಾಯ್ ಮಾಡುವ ಗಿಡ್ಡಿ ದಯ್ಯ. ನಿಗೂಢವಾಗಿಯೇ ಉಳಿದು ಬಿಡುವ ಪೋರ್ಚಿಗೀಸ್ ಮಾಟಗಾತಿ, ಧರ್ಮ, ದೇವರು ಮತ್ತು ಮತದ ನಡುವಿನ ವ್ಯತ್ಯಾಸ ಸಾರುವ ಅಯ್ಯ. ಹೀಗೆ ಇವೆಲ್ಲವನ್ನೂ ನಾವು ಜಂಬೊ ಐಲ್ಯಾಂಡ್ ನಲ್ಲಿ ಕಾಣಬಹುದು.