ಹಿರಿಯ ಸಾಹಿತಿ ದೊಡ್ಡೇರಿ ವೆಂಕಟಗಿರಿರಾವ್ ಬರೆದಿರುವ ಕೃತಇ’ ಇಷ್ಟಕಾಮ್ಯ’.
ಇದು ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿಯೂ ಮೂಡಿಬಂದಿದೆ.
ಲೇಖಕರು ಕಳೆದ 50 ವರ್ಷಗಳ ಕಾಲ ಅವರ ವೈದ್ಯಕೀಯ ವೃತ್ತಿಯಲ್ಲಿ ಸಾವಿರಾರು ಸಂಸಾರಗಳೊಂದಿಗೆ ಒಡನಾಡಿ, ನೂರಾರು ಜನರೊಡನೆ ಬೆರೆತು ನಿಕಟವಾಗಿ ಅನೇಕರ ಆಸೆ, ನಿರಾಸೆ, ಬಯಕೆ, ಬಿನ್ನಹ, ಕಷ್ಟ ಕಾರ್ಪಣ್ಯ, ಸುಖ ದುಃಖ, ಸಂದೇಹ, ಸಮಾಧಾನಗಳನ್ನು ಅರಿತಿದ್ದಾರೆ. ಇವೆಲ್ಲವುಗಳ ಹಿನ್ನೆಲೆಯ ವಸ್ತುವಾಗಿ ’ಇಷ್ಟಕಾಮ್ಯ’ ಕೃತಿ ರಚಿತಗೊಂಡಿದೆ.
ಈ ಕೃತಿಯಲ್ಲಿ ಬರುವ ಸನ್ನಿವೇಶ ಮತ್ತು ಘಟನೆಗಳನ್ನು ಮಾನವ ಭಾವ ಸಂಬಂಧಗಳಲ್ಲಿ ತೋರಿಸುತ್ತಾ ಸಹಜವಾಗಿ ರೂಪಿಸಲಾದ ಕೃತಿ ಎನ್ನಬಹುದು. ಈ ಕಾದಂಬರಿಯು ಮೊದಲ ಸಲ 1987ರಲ್ಲಿ ಪ್ರಕಟವಾಗಿತ್ತು.
.ದೊಡ್ಡೇರಿ ವೆಂಕಟರಾವ್ಅವರು ಚಿತ್ರಗ್ರಹಣ ಪ್ರವೀಣರೂ, ಕಾದಂಬರಿಕಾರರು. ಸಾಹಿತ್ಯ ಕೃಷಿ, ಛಾಯಾಗ್ರಹಣದಲ್ಲಿ ಪ್ರವೀಣರು. ಇವರು 1913 ಡಿಸೆಂಬರ್ 28 ರಂದು ಸೊರಬ ತಾಲ್ಲೂಕಿನ ದೊಡ್ಡೇರಿಯಲ್ಲಿ ಜನಿಸಿದರು. ಸಾಹಿತ್ಯ ಕೃಷಿಯ ಆರಂಭದಲ್ಲಿ “ಕಲಾಕುಮಾರ” ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ವೃತ್ತಿಯಲ್ಲಿ ವೈದ್ಯರು. ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮುಕ್ತಾ, ಅವಧಾನ, ದೃಷ್ಟಿದಾನ ಅವರ ಪ್ರಮುಖ ಕಾದಂಬರಿಗಳು. ಪುಟ್ಟಣ್ಣ ಕಣಗಾಲ ಅವರ “ಅಮೃತ ಘಳಿಗೆ”, ಇವರ ಕಾದಂಬರಿ (ಅವಧಾನ) ಆಧಾರಿತವಾದದ್ದು. ಇಷ್ಟಕಾಮ್ಯ ಇವರ ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಅದೇ ಹೆಸರಿನಲ್ಲಿ ಪ್ರಕಟಗೊಂಡಿದೆ. ಅವರು ಮನೋವಿಜ್ಞಾನದ ವಿಷಯವನ್ನಾಧರಿಸಿ “ವಿಕೃತ ಕಾಮ, ಪ್ರಸವ ಜ್ಞಾನ, ಸಂತಾನ ಸಂಯಮ” ಎಂಬ ...
READ MORE