‘ಹಾಂಟೆಡ್ ಹೊಸಮನೆ’ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಇತ್ತೀಚಿನ ಕಾದಂಬರಿ. ಈ ಕಾದಂಬರಿಯು ವಿಭಿನ್ನವಾದ ಕತೆ, ಸಹಜ ಸಂಭಾಷಣೆ, ತಾರ್ಕಿಕ ತಿರುವು, ಕ್ಷಣ ಕ್ಷಣಕ್ಕೂ ಬದಲಾಗುವ ಸನ್ನಿವೇಶಗಳು, ಹಾರರ್ ಅನುಭವಗಳು, ಪ್ಯಾರಾನಾರ್ಮಲ್ ಶಕ್ತಿಗಳು, ಮನಸ್ಸನ್ನು ಆವರಿಸಿಕೊಳ್ಳುವ ಪಾತ್ರಗಳಿರುವ ಕಾದಂಬರಿಯಾಗಿದೆ. ಗೃಹಪ್ರವೇಶದ ದಿನದಂದು ಮನೆಯೊಂದರಲ್ಲಿ ಜೋಡಿ ಕೊಲೆಗಳು ನಡೆದು ಆಗುವ ಕಷ್ಟನಷ್ಟಗಳು, ಹಾಂಟೆಡ್ ಮನೆಯೆಂಬ ಕುಖ್ಯಾತಿ ಪಡೆದ ಆ ಮನೆಯಲ್ಲಿ ಆಗುವ ಹಾಂಟೆಡ್ ಅನುಭವಗಳು, ಅದನ್ನು ತನಿಖೆ ಮಾಡುವವರ ಸಾಹಸ, ಹೀಗೆ ಕ್ಷಣಕ್ಷಣಗಳ ಮೈನವಿರೇಳಿಸುವ ವ್ಯಾಖ್ಯಾನಗಳಿದ್ದು ಓದುಗರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ- ಹಾಂಟೆಡ್ ಹೊಸಮನೆ.
ಕತೆಗಾರ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರು (ಜನನ: 1969 ಡಿಸೆಂಬರ್ 13) ಮಂಜೇಶ್ವರದ ಕೊಡ್ಲಮೊಗರುದವರು. ಕೊಡ್ಲಮೊಗರು ಹಾಗೂ ಮಂಗಳೂರಿನಲ್ಲಿ ಶಿಕ್ಷಣ ಪಡೆದು, ವಾಣಿಜ್ಯ ವಿಭಾಗದಲ್ಲಿ ಪದವೀಧರರು. ಅಂತಾಷ್ಟ್ರೀಯ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ವೃತ್ತಿಪರರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪೂರ್ಣಸತ್ಯ, ಮದನಿಕೆ ಹಾಗೂ ಹಾಂಟೆಂಡ್ ಹೊಸಮನೆ ಇವರ ಕೃತಿಗಳು. ...
READ MORE