‘ಗುರಿ’ ವಾಣಿರಾವ್ ಅವರ ಕಾದಂಬರಿಯಾಗಿದೆ. ಕೆ. ಕೃಷ್ಣಮೂರ್ತಿ ನಾಯಕ್ ಅವರ ಮುನ್ನುಡಿ ಬರಹವಿದೆ: ವೈದ್ಯಕೀಯ ಜಗತ್ತಿನಲ್ಲಿ ಇಂದಿನ ಈ ಜಾಗತೀಕರಣ, ಉದಾರೀಕರಣ ಹಾಗೂ ವ್ಯಾಪಾರೀಕರಣ ವ್ಯವಸ್ಥೆಯಡಿಯಲ್ಲಿ ಯಾವುದೇ ಔಷಧದ ಬಗ್ಗೆ ಖಚಿತವಾದ ಅಭಿಪ್ರಾಯಗಳನ್ನು ಮಂಡಿಸುವುದು ತುಸು ಕಷ್ಟವೇ ಸರಿ. ಆಲೋಪತಿ, ಹೋಮಿಯೋಪತಿ, ಯುನಾನಿ ಆಯುರ್ವೇದಿಕ್, ಗಿಡಮೂಲಿಕೆಗಳಿಂದ ಬೇರೆ ಬೇರೆ ತಳಹದಿಯ ಮೇಲೆ ಔಷಧೋಪಚಾರ ನಡೆಸುವ ಪದ್ಧತಿ ಈಗಲೂ ಜಾರಿಯಲ್ಲಿರುವುದು ಮಾನವನ ನಂಬಿಕೆಯ ತಳಹದಿಯ ಮೇಲೆ ನಿಂತಿರುವ ಒಂದು ವ್ಯವಸ್ಥೆ.
ಲೇಖಕರು ಈ ಎಲ್ಲಾ ಇತ್ತೀಚಿನ ಸಂಶೋಧನೆಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು, ಕಲಾತ್ಮಕವಾಗಿ, ವಿವರಣೆಗಳನ್ನು ನೀಡುತ್ತಾ ರೋಗದ ಬಗ್ಗೆ ಔಪದೊಪಚಾರಗಳನ್ನು ತಿಳಿಸಿರುವುದು ಅವರ ಅಪಾರವಾದ ವೈದ್ಯಕೀಯ ವ್ಯವಸ್ಥೆಯ ಸನಿಹತೆಯನ್ನು ಎತ್ತಿ ತೋರಿಸುತ್ತದೆ.
ರೋಗಿಗಳ ಶುಶ್ರೂಷೆಯಲ್ಲಿ ಅವರ ನೋವುಗಳಲ್ಲಿ ನೇರವಾಗಿ ಭಾಗಿಯಾಗುವಂತಹ ಅವಕಾಶ ಲೇಖಕರಿಗೆ ಲಭಿಸಿದ್ದು, ಅವರ ಮನೋಶಕ್ತಿ, ಇಚ್ಛಾಶಕ್ತಿ ನೂರ್ಮಡಿಯಾಗಲು ಕಾರಣೀಭೂತವಾಗಿದೆ. ಲೇಖಕರು ಕಾರ್ಗಿಲ್ ಯುದ್ಧದ ಸಮಯದಲ್ಲಿ 'ರೆಡ್ ಕ್ರಾಸ್' ಸಂಸ್ಥೆಯಡಿ ರೋಗಿಗಳ, ಗಾಯಾಳುಗಳ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಹಲವಾರು ರೋಗಗಳ ಬೆಳಕನ್ನು ಅವರ ಈ ಕಥಾನಕದಲ್ಲಿ ಪ್ರಸ್ಥಾಪಿಸಿರುವುದು ಸೋಜಿಗವೇನಲ್ಲ ಎಂಬುವುದನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
ಕವಿತೆ, ಕತೆ, ಕಾದಂಬರಿ ಕ್ಷೇತ್ರದಲ್ಲಿ ಬರವಣಿಗೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಬರಹಗಾರ್ತಿ ವಾಣಿ ರಾವ್ ಅವರು 1931 ಅಕ್ಟೋಬರ್ 4ರಂದು ಜನಿಸಿದರು. ತಾಯಿ ಇಂದಿರಾಬಾಯಿ. ತಂದೆ ಭೀಮಾಚಾರ್. ಹೋಮಿಯೋಪತಿಯಲ್ಲಿ ಪಿಎಚ್ಡಿ ಪದವೀಧರರು. ಕಾಲೇಜು ದಿನಗಳಿಂದಲೇ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಕವಿತೆ, ಮಕ್ಕಳ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಣಿ ಅವರು ರಚಿಸಿದ ಪ್ರಮುಖ ಕೃತಿಗಳೆಂದರೆ ಸುಪ್ತಚೇತನ, ದರ್ಪಣ, ಆಕಾಶದೀಪ, ಹೇಮಶೃಂಗ (ಕಾದಂಬರಿ); ವನಸುಮ, ನೀಲಕೊಳ, ಗಣೇಶ ಎಲ್ಲಿ, ಮಾಯಾವಿ (ಮಕ್ಕಳ ಕತೆ), ಸಿಂಧು-ಬಿಂದು (ಭಾಷಾಂತರ); ಚಿನ್ನಯ ರಾಮಾಯಣ, ಮಗು, ಸ್ವಾಮಿ ಪ್ರಣವಾನಂದಜೀ (ವೈದ್ಯಕೀಯ); ಹೋಮಿಯೋಪತಿ, ಮೆಟೀರಿಯಾ ಮೆಡಿಕಾ ಸೂತ್ರಗಳು (ಕವನ ಸಂಕಲನ); ...
READ MORE