‘ದ್ವಾಪರ’ ಕಂನಾಡಿಗಾ ನಾರಾಯಣ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಸಂಕೀರ್ಣವಾದ ಮಹಾಭಾರತವನ್ನು ವಿಭಿನ್ನವಾದ ವಿಶ್ಲೇಷಣೆಗೆ ಒಳಪಡಿಸುವ ಕಾದಂಬರಿ 'ದ್ವಾಪರ'. ವಿವಿಧ ಸಂದರ್ಭ ಸನ್ನಿವೇಶಗಳನ್ನು ಆಯಾ ಪಾತ್ರಗಳು ಮನೋವೈಜ್ಞಾನಿಕವೆನ್ನುವಂತೆ ವಿಶ್ಲೇಷಿಸುತ್ತ, ತಮ್ಮ ತಮ್ಮ ಅಂತರಂಗದ ತುಮುಲಗಳನ್ನು ಶೋಧಿಸಿಕೊಳ್ಳುತ್ತಲೇ ವಾಸ್ತವವನ್ನು ಉದ್ದಸ್ಥಗೊಳಿಸುತ್ತ, ವೈಚಾರಿಕ-ವೈಜ್ಞಾನಿಕವಾಗಿ ವರ್ತಮಾನದ ಒರೆಗಲ್ಲಿಗೆ ಹಚ್ಚುತ್ತ, ಮಿಥ್ಗಳನ್ನು ಒಂದೊಂದಾಗಿ ಒಡೆಯುತ್ತ ಸಾಗುತ್ತವೆ.. ಎಲ್ಲವನ್ನು ಸ್ಕೂಲವಾಗಿ, ಸೂಚ್ಯವಾಗಿ ನಿರ್ವಚಿಸಿದಂತೆ ಕಂಡರೂ ಎಲ್ಲ ಅರ್ಥ ಸಾಧ್ಯತೆಗಳನ್ನೂ ಹೊರಹೊಮ್ಮಿಸುವ ಕಂನಾಡಿಗಾ ನಾರಾಯಣ ಅವರದು ಅದ್ಭುತ ಚಿತ್ರಕ ಶಕ್ತಿ. ಇವೆಲ್ಲದರ ಹಿಂದಿನ ಅವರ ಅಪಾರ ಓದು, ಪರಿಶ್ರಮ, ಕಲ್ಪನಾಶಕ್ತಿಯಿಂದ ವಿಸ್ತಾರವಾದ ಮಹಾಭಾರತವನ್ನು ಅಗತ್ಯಕ್ಕೆ ತಕ್ಕಂತೆ ಸಂಗ್ರಹಿಸಿ, ವಿಸ್ತರಿಸಿ, ವಿಚ್ಛೇದಿಸಿ. ಪುನರ್ನಿಮಿ್ರಸುವ ಹಾಗೂ ಅವೆಲ್ಲವನ್ನೂ ತಳುಕು ಸ್ಪೋಪಜ್ಞತೆಯಿಂದಾಗಿ 'ದ್ವಾಪರ' ಆಪ್ತವಾಗುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...
READ MORE