ದಿಕ್ಕಾಪಾಲು

Author : ರವೀಂದ್ರ ಸಿಂಗ್

Pages 122

₹ 80.00




Year of Publication: 2015
Published by: ಪವಿತ್ರ ಪ್ರಕಾಶನ
Address: ಬೂರಮಾಕನಹಳ್ಳಿ, ದೊಡ್ಡವಲಗಮಾದಿ ಅಂಚೆ, ತಾ: ಬಂಗಾರಪೇಟೆ, ಜಿ: ಕೋಲಾರ-563120
Phone: 9731573462

Synopsys

ಓದು ಮೊಟಕುಗೊಳಿಸಿ ಕೃಷಿಯಲ್ಲಿ ತೊಡಗಿಸಿಕೊಂಡ ಯುವಕ, ಕಾರಣಾಂತರದಿಂದ ಹಾನಿಗೊಳಗಾಗಿ, ನಗರ ಸೇರುತ್ತಾನೆ. ಅಲ್ಲೊಬ್ಬ ಗೆಳೆಯನಿಂದ ಮೋಸಕ್ಕೊಳಗಾಗಿ ಅಕ್ಷರಶಃ ಆತನ ಬದುಕು ಬೀದಿಗೆ ಬೀಳುತ್ತದೆ. ನಗರದ ಕಸ ಎತ್ತುವ ಮೂಲಕ ಹೇಗೋ ದಿನದೂಡುತ್ತಾ ಕೊನೆಗೆ ಮರಳಿ ತನ್ನೂರಿಗೆ ಬರುವ ದಯನೀಯ ಕಥೆವಸ್ತು ಹೊಂದಿರುವ ಈ ’ದಿಕ್ಕಾಪಾಲ’ ಕಾದಂಬರಿಯು  ಇಂದಿನ ಲಾಭದಾಯಕವಲ್ಲದ ಕೃಷಿ ಹಾಗೂ ನಗರದ ಥಳಕು-ಬೆಳಕಿಗೆ ಮಾರು ಹೋಗಿ, ಬದುಕನ್ನೇ ದಿಕ್ಕಾಪಾಲಾಗಿಸಿ ಕೊಳ್ಳುವ ಯುವಕರ ದಾರುಣ ಚಿತ್ರಣವನ್ನು ನೀಡುತ್ತದೆ. 

About the Author

ರವೀಂದ್ರ ಸಿಂಗ್
(26 July 1977)

ರವೀಂದ್ರ ಸಿಂಗ್ ಅವರು ಎಂ.ಎ. ಪದವೀಧರರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಅಂಚೆ ವ್ಯಾಪ್ತಿಯ ಬೂರಮಾಕನಹಳ್ಳಿಯವರು. 1977ರ ಜುಲೈ 26 ರಂದು ಜನನ. ಸದ್ಯ, ಕೋಲಾರದ ಆದರ್ಶ ಕಾಲೇಜಿನಲ್ಲಿ ವ್ಯವಸ್ಥಾಪಕರು. ಋತುಗಾನ, ಕಪ್ಪು ಫ್ರೇಮಿನ ಕನ್ನಡಕ (ಕವನ ಸಂಕಲನಗಳು), ದಿಕ್ಕಾಪಾಲು -ಕಾದಂಬರಿ ಹಾಗೂ ಗುಣ ಸಂಪನ್ನ-ಕಥಾ ಸಂಕಲನ ಪ್ರಕಟಗೊಂಡಿವೆ. ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶೇಷ ಸಂಚಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಕನ್ನಡ ಸಾಂಸ್ಕೃತಿಕ ಅಕಾಡೆಮಿಯಿಂದ (2007) ಸಾಹಿತ್ಯ ರತ್ನ, ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಬೆಂಗಳೂರು ವತಿಯಿಂದ ಭಾರತ ರತ್ನ ಸರ್ . ...

READ MORE

Related Books