ಧಾವತಿ

Author : ಗಂಗಪ್ಪ ತಳವಾರ

Pages 102

₹ 120.00




Year of Publication: 2023
Published by: ತಮಟೆ ಪಬ್ಲಿಕೇಷನ್
Address: ಎಸ್-5, ವಿಜಯ ಗ್ಯಾಲಾಕ್ಸಿ ಅಪಾರ್ಟ್ಮೆಂಟ್, ಮಾರುತಿನಗರ, ಕಾಮಾಕ್ಷಿಪಾಳ್ಯ, ಬೆಂಗಳೂರು- 560079
Phone: 9535320556

Synopsys

‘ಧಾವತಿ’ ಗಂಗಪ್ಪ ತಳವಾರ ಅವರ ಮೊದಲ ಕಾದಂಬರಿ. ಈ ಕೃತಿಗೆ ಚಿಂತಕ ನಟರಾಜ್ ಹುಳಿಯಾರ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ.. ‘ಸಾವಿರಾರು ವರ್ಷಗಳಿಂದ ಹರಿದು ಬಂದ ಯಾವುದೇ ಭಾಷೆಯ ನುಡಿಗಟ್ಟುಗಳಲ್ಲಿ ನಿರಂತರವಾಗಿ ಬಿಚ್ಚಿಕೊಳ್ಳುತ್ತಾ ಹೋಗುವ ಜ್ಞಾನ, ವಿವೇಕಗಳನ್ನು ಕಂಡು ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ವಿಸ್ಮಯಗೊಳ್ಳುತ್ತಾನೆ. ಗಂಗಪ್ಪ ತಳವಾರ ಬರೆದ ಧಾವತಿ ಕಾದಂಬರಿಯೊಳಗೆ ಕೋಲಾರ ಸೀಮೆ ಸುತ್ತಮುತ್ತಲ ಆಡುಮಾತಿನಲ್ಲಿ ಚಿಮ್ಮುವ ಬಾಳಿನ ಅನುಭವಗಳು, ಚಿತ್ರಗಳು ಹಾಗೂ ನೋಟಗಳನ್ನು ಕಂಡಾಗ ಫ್ರಾಯ್ಡ್ ವಿಸ್ಮಯ ನನ್ನ ಅರಿವಿಗೂ ಬರತೊಡಗಿತು. ತನ್ನ ತಾರುಣ್ಯವನ್ನು ಕೋಲಾರದ ಆದಿಮ ಬೆಟ್ಟದ ಸುತ್ತ ಕಳೆದಿರುವ ಅಸಲಿ ದನಿಯ ಕವಿ ಗಂಗಪ್ಪ ಬರೆದ ಈ ಪುಟ್ಟ ಕಾದಂಬರಿ ಕನ್ನಡ ಕಥಾಲೋಕಕ್ಕೆ ಇನ್ನೂ ಪರಿಚಯವಿರದ ಸ್ತ್ರೀಲೋಕವನ್ನು ಸಿದ್ಧ ಅನುಕಂಪದ ಗಡಿ ಮೀರಿ ಸಹಜವಾಗಿ ಗ್ರಹಿಸಲೆತ್ನಿಸಿದೆ.

ಚಿಂದಿಯಾದ ಚಂದ್ರಿಯ ದಾರುಣ ಬದುಕಿನ ಏರುಪೇರು, ಅವಮಾನ, ಅವಳ ಕಣ್ಣು, ದೇಹ, ಆತ್ಮ, ಲಯ, ಮಾತು, ಮನೋಲೋಕಗಳ ಜೊತೆಗೇ ಸಾಗುವ ಕಾದಂಬರಿಕಾರ ಅವಳ ಮೈ ಮನಗಳ ಲಯಗಳಲ್ಲಿ ಬೆರೆಯುವ ರೀತಿ ಅನನ್ಯವಾಗಿದೆ’ ಎಂದಿದ್ದಾರೆ ನಟರಾಜ್ ಹುಳಿಯಾರ್. ಹಾಗೇ ಕನ್ನಡ ಸಾಹಿತ್ಯ ಕಂಡ ಹಲವು ಚಳುವಳಿಗಳ ಗುರುತನ್ನು ಉಳಿಸಿಕೊಂಡೂ, ಆ ಮಾದರಿಗಳಾಚೆಗೆ ದಾಟಿ ಕತೆ ಹೇಳುವ ಕಾತರ ತೋರುವ ‘ಧಾವತಿ’ ಕಾದಂಬರಿ ವಿವಿಧ ದ್ರಾವಿಡ ಭಾಷೆಗಳು ಬೆರೆಯುವ ಸೀಮೆಯ ವಿಶಿಷ್ಟ ನುಡಿಗಟ್ಟುಗಳಿಗೆ ಮಾತ್ರವೇ ದಕ್ಕಬಲ್ಲ ಲೋಕ ಸತ್ಯಗಳನ್ನು ಕೈ ಚಾಚಿದೆ. ಆ ಲೋಕದಿಂದಲೇ ಒಡಮೂಡಿದ ಶಕ್ತ ಕಾದಂಬರಿಕಾರನ ಹುಟ್ಟನ್ನು ಇಲ್ಲಿನ ಪುಟ-ಪುಟವೂ ಸಾರುತ್ತದೆ. ತಮ್ಮ ಪಾತ್ರಗಳ ಸಾಮಾಜಿಕ ಭಿತ್ತಿಯ ಒಳಹೊರಗಿನಲ್ಲಿ ಇನ್ನಷ್ಟು ಆಳವಾಗಿ ತೊಡಗಿ, ಭಾಷೆಯ ಜೀವಂತ ಲಯಗಳ ಜೊತೆಗೆ ಬೆಸುಗೆಯರಿಯದಂತೆ ಬೆರೆವ ಕಲೆ ದಕ್ಕಿದ ದಿನ ಗಂಗಪ್ಪ ಕನ್ನಡದ ಮಹತ್ವದ ಕಾದಂಬರಿಕಾರರಾಗಬಲ್ಲರು ಎಂದಿದ್ದಾರೆ.

About the Author

ಗಂಗಪ್ಪ ತಳವಾರ

ಗಂಗಪ್ಪ ತಳವಾರ ಮೂಲತಃ ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದವರು. ತಾಯಿ- ಮೋಟಮ್ಮ, ತಂದೆ- ಚಿನ್ನಪ್ಪ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ ಕನ್ನಡ ಎಂಎ ಹಾಗೂ ಬಿಎಡ್ ಪದವಿಗಳಲ್ಲಿ ತೇರ್ಗಡೆಯಾಗಿದ್ದಾರೆ. ಮೊದಲಿಗೆ ಗಂಗಪ್ಪ ಎಂಬ ಹೆಸರಿದ್ದ ಇವರು ಊರಿನಲ್ಲಿ ತಳವಾರಿಕೆ ‘ಕುಳವಾಡಿ' ಚಾಕರಿ ಮಾಡುತ್ತಿದ್ದ ಕಾರಣ ಮನೆತನಕ್ಕೆ ಅಂಟಿಕೊಂಡಿದ್ದರಿಂದ ತಳವಾರಿಕೆ ಹೆಸರಿಗಂಟಿ 'ಗಂಗಪ್ಪ ತಳವಾರ್' ಎಂಬ ಹೆಸರಿನಲ್ಲಿಯೇ ಬರವಣಿಗೆ ಆರಂಭಿಸಿದರು. ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದ ಸಹಕಾರದೊಂದಿಗೆ ದಲಿತ ಸಂಘರ್ಷ ಸಮಿತಿ, ಗೌರಿಬಿದನೂರು ಪ್ರಕಟಿಸಿದ 'ಮೋಹನಗಾನ' ಎಂಬ ವ್ಯಕ್ತಿಚಿತ್ರವನ್ನು ಸಂಪಾದಿಸಿದ್ದಾರೆ. ಸಂತಕವಿ ಕನಕದಾಸ ಅಧ್ಯಯನ ಮತ್ತು ...

READ MORE

Related Books