‘ದನಗಳ ಚೆನ್ನಿ’ ಎ.ಸರಸಮ್ಮ ಅವರ ಸಮಾಜಿಕ ಕಾದಂಬರಿಯಾಗಿದೆ. ಮೇಲು ಕೀಳೆಂಬ ಭಾವನೆಗಳನ್ನು ಬೆಳೆಸಿಕೊಳ್ಳದೆ ಬಡವ-ಬಲ್ಲಿದರೆಂಬ ಭೇದ-ಭಾವಗಳು ನಮ್ಮ ಮನಸ್ಸಿನಿಂದ ದೂರವಾಗಿ ಸಮರಸ ಬದುಕನ್ನು ನಾವು ಬಯಸಿದಾಗ ಬಾಳು ಸಂತೋಷವಾಗಿ ಅವಿಭಕ್ತ ಕುಟುಂಬಗಳಲ್ಲಿ ಸಾಮರಸ್ಯ ಮೂಡಿ ಎಲ್ಲರಲ್ಲಿ ಪ್ರೀತಿ, ವಿಶ್ವಾಸಗಳು ತುಂಬಿ ಸಂತೋಷವಾಗಿ ಬಾಳಲು ಅನುಕೂಲವಾಗುತ್ತದೆ.
ಈಗಿನ ಬೆಳವಣಿಗೆಯ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ತೀರ ವಿರಳವಾಗಿದ್ದು, ಬಾಂಧವ್ಯಗಳ ಕೊಂಡಿಗಳು ಕಳಚುತ್ತಿವೆ. ಮಕ್ಕಳು ಬೆಳವಣಿಗೆಯಿಂದಲೇ ಇಂತಹ ಸಂಬಂಧಗಳಿಂದ ದೂರವಾಗಿ ಅವರಿಗೆ ಸಂಬಂಧಗಳ ಅರಿವೇ ಇಲ್ಲದಂತಾಗುತ್ತಿದೆ, ನೀತಿದಾಯಕವಾದ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಇಂತಹ ಬರವಣಿಗೆಗಳು ಪೂರಕವಾಗುತ್ತವೆಂದು “ದನಗಳ ಚೆನ್ನಿ” ಸಮಾಜಿಕ ಕಾದಂಬರಿಯು ತಿಳಿಸಿಕೊಡುತ್ತದೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE