ಪದ್ಮಶ್ರೀ ಕಾಕೋಳು ಅವರ ಕೃತಿ ದಾಳ. ಕೃತಿಯಲ್ಲಿ ಆಚಾರ್ಯರಿಗೆ ಆಚಾರ-ವಿಚಾರ, ಮಡಿ-ಮೈಲಿಗೆ ಹೆಚ್ಚು ಸ್ನಾನ ಮಾಡಿ ಸಂಧ್ಯಾ ವಂದನೆ ಮಾಡದೆ ಒಂದು ತೊಟ್ಟು ನೀರು ಕುಡಿಯದ ಅವರ ಜೀವನದಲ್ಲಿ ಲಕ್ಷ್ಮಣ.ಹರಿ.ವೆಂಕೊಬ.ಲಕ್ಷ್ಮಿ.ಭಾಗಿರಥಿ ಮಕ್ಕಳು. ತನ್ನ ಮಗಳು ಲಕ್ಷ್ಮಿಗೆ ಮಧ್ಯ ವಯಸ್ಸಿನ ಭೀಮರಾಯನಿಗೆ ಮದುವೆ ಮಾಡಿಕೊಡುತ್ತಾರೆ. ಮಕ್ಕಳನ್ನು ಕಾಲೇಜಿನಲ್ಲಿ ಓದಿಸುತ್ತಾರೆ ಎರಡನೆ ಮಗಳು ಭಾಗಿರಥಿ ಅಲಂಕಾರ ಪ್ರಿಯೆ. ಭೀಮರಾಯ ತನ್ನ ಹೆಂಡತಿ ಲಕ್ಷ್ಮಿಯನ್ನು ಚೆನ್ನಾಗಿ ನೋಡಿಕೊಂಡರೂ ವಿಧಿ ಲಿಖಿತ ಮದುವೆಯಾದ ಅರು ತಿಂಗಳಿಗೆಲ್ಲ ವಿದವೆಯಾಗಿ ತವರು ಮನೆ ಸೇರುತ್ತಾಳೆ. ಭಾಗೀರಥಿ ಒಬ್ಬಳನ್ನು ಬಿಟ್ಟು ಉಳದೆಲ್ಲವರು ಲಕ್ಷ್ಮಿಯನ್ನು ಚೆನ್ನಾಗಿ ನೋಡಿಕೊಂಡರು ಅದರಲ್ಲಿ ತಪ್ಪು ಕಂಡು ಹಿಡಿಯುವಾಕೆ ಲಕ್ಷ್ಮಿ. ಲಕ್ಷ್ಮಣ ಓದು ಮುಗಿಸಿ ಕೆಲಸಕ್ಕೆ ಸೇರುತ್ತಾನೆ.ಆಚಾರ್ಯರು ಮಗನಿಗೆ ಸರಸ್ವತಿಯನ್ನ ಮದುವೆ ಮಾಡಿಸುತ್ತಾರೆ. ಆದರೆ ಸರಸು ಆ ಮನೆಯಲ್ಲಿ ತನ್ನ ಅಧಿಕಾರ ಚಲಾಯಿಸುತ್ತಾಳೆ. ಲಕ್ಷ್ಮಿಯನ್ನ ಮೂದಲಿಸುತ್ತಾ ಮನೆಯಲ್ಲಿ ಆಶಾಂತಿ ಉಂಟು ಮಾಡುತ್ತಾಳೆ. ಭಾಸ್ಕರನ ಪರಿಚಯವಾಗಿ ಲಕ್ಷ್ಮಿಗೆ ಆತನ ಪ್ರೀತಿಯಲ್ಲಿ ಬೀಳುತ್ತಾಳೆ.ಭಾಗೀರಥಿಗೆ ಮದುವೆಯಾಗಿ ಗಂಡನ ಮನೆಯಲ್ಲಿ ಸಂಸಾರ ಮಾಡದೆ ತವರು ಮನೆಯಲ್ಲಿ ಉಳಿಯುತ್ತಾಳೆ.ಲಕ್ಷ್ಮಿಯ ಪ್ರೇಮ ಮನೆಯಲ್ಲಿ ತಿಳಿದು ರಂಪಟಾವಾಗಿ ಭಾಸ್ಕರನೊಂದಿಗೆ ಮನೆ ಬಿಟ್ಟು ಹೋಗುತ್ತಾಳೆ. ಹರಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುತ್ತಾನೆ.ಸರಸು ಗಂಡನ ಮನೆಯಲ್ಲಿ ಇರಲಾರದೆ ತನ್ನ ತವರು ಮನೆಗೆ ಹೋಗುತ್ತಾಳೆ.ಭಾಗೀರಥಿ ಗಂಡ ಆನಂದ ಸಾಕಷ್ಟು ಬಾರಿ ಕೇಳಿಕೊಂಡರೂ ಗಂಡನ ಮನೆಗೆ ಬರಲು ಒಪ್ಪದ ಗಂಡನ ಬೇರೆ ಮದುವೆಯ ಅವಂತ್ರಣ ಕಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದೆ ಸಂದರ್ಭದಲ್ಲಿ ಕಾಲೇಜಿನಲ್ಲಿ ಪ್ರವಾಸ ಹೋಗಿದ್ದ ವೆಂಕೊಬ ಸಮುದ್ರದಲ್ಲಿ ಸಿಕ್ಕು ಸಾವನ್ನಪ್ಪುತ್ತಾನೆ. ಇದರಿಂದ ಕುಗ್ಗಿಹೋದ ಆಚಾರ್ಯರಿಗೆ ಮತ್ತೊಂದು ಆಘಾತವೆಂಬಂತೆ,ಹರಿ ವಿದೇಶದಿಂದ ಒಬ್ಬನೆ ಬರದೆ ಬಿಳಿಹೆಂಡತಿಯ ಜೊತೆ ಬರುತ್ತಾನೆ. ಇದರಿಂದ ಆಚಾರ್ಯರ ಹೆಂಡತಿ ಸೀತಮ್ಮನಿಗೆ ಅಘಾತವಾಗಿ ಸಾವನ್ನಪ್ಪುತ್ತಾರೆ.ಹರಿ ಹಾಗೂ ಲಕ್ಷ್ಮಣನಿಗೆ ತನ್ನ ಮನೆಯನ್ನು ಭಾಗ ಮಾಡಿ ತನ್ನ ಸಾಕು ಮಗ ಕೃಷ್ಣ ನೊಂದಿಗೆ ಊರು ಬಿಟ್ಟು ಹೋಗುತ್ತಾರೆ ಎಂಬುದು ಕತೆಯ ತಿರುಳು..
ಕಾದಂಬರಿಗಾರ್ತಿ ಪದ್ಮಶ್ರೀ ಕಾಕೋಳು ಅವರು 1966 ಡಿಸೆಂಬರ್ 17 ರಂದು ಜನಿಸಿದರು. ಬಾಲ್ಯದಿಂದಲೇ ಓದುವ ಹವ್ಯಾಸ ಉಳ್ಳವರಾಗಿದ್ದ ಅವರು “ಪ್ರೇಮಹಾರ, ಹೇಮಂತಗಾನ, ಕಪ್ಪು ಮೋಡದಲ್ಲಿ ಬಿಳಿ ಅಂಚು, ಮಂಗಳ ಮುಂಜಾನೆ, ಗ್ರಾಮಸಿಂಧೂರ, ಹೂಬಾಣ, ಅನ್ನೋನ್ಯ, ಬಾರೋ ವಸಂತ, ದಾಳ, ಸೂಜಿಗಲ್ಲು” ಮುಂತಾದ ಕಾದಂಬರಿಗಳನ್ನು ರಚಿಸಿದ್ಧಾರೆ. ...
READ MORE