ಬಣ್ಣದ ಹಸೆಮಣೆ ಮತ್ತು ಹೂವಿಗಂಟಿದ ಜೇನು

Author : ಹೆಚ್.ಜಿ. ರಾಧಾದೇವಿ

Pages 204

₹ 180.00




Year of Publication: 2001
Published by: ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

Synopsys

ಹೆಚ್.ಜಿ.ರಾಧಾದೇವಿಯವರ ಕಾದಂಬರಿಗಳಲ್ಲಿ ಮಧ್ಯಮ ವರ್ಗದ ಕುಟುಂಬದ ಕಥೆಯೇ ಹೆಚ್ಚು ಮತ್ತು ನಾಯಕಿ ಪ್ರಧಾನ ಕಥೆಗಳೇ ಅಧಿಕ ಎನ್ನಬಹುದು.ಆದರೆ ಈ ಕಥೆ ಇದೇ ರೀತಿಯಾಗಿದ್ದರೂ ಕೊಂಚ ಭಿನ್ನವಾಗಿ ಮಧ್ಯಮ ಮತ್ತು ಸಿರಿವಂತ ವರ್ಗದ ಮತ್ತು ನಾಟಕ ರಂಗ ಇಂತಹ ಹಲವು ವಿಷಯವನ್ನಿಟ್ಟುಕೊಂಡು ಕಥೆ ಹೆಣೆದಿದ್ದಾರೆ. ಮಧ್ಯಮ ವರ್ಗದ ಬದುಕಿನೊಂದಿಗೆ ಸಿರಿವಂತ ವರ್ಗದ ಬದುಕಿನ ಹಿಂದೆಯೂ ಇರುವ ಸಮಸ್ಯೆ , ವ್ಯಥೆ, ನಿಜರೂಪಗಳ ದರ್ಶನ ಹವ್ಯಾಸಿ ನಾಟಕ ರಂಗ ನಡೆಯುವ ಬಗೆ, ನಟಿಯಾಗಿ ನಾಟಕ ರಂಗಕ್ಕೆ ಬಂದವಳೊಬ್ಬಳ ಬವಣೆ, ಅವಳ ಜೀವನದ ತಿರುವುಗಳು, ಬಡ ಕುಟುಂಬದ ಹೆಣ್ಣು ಮಗಳೊಬ್ಬಳ ಮದುವೆಯಿಂದ ಬದಲಾದ ಅವಳ ಮತ್ತವಳ ತಾಯಿಯ ಮನೆಯ ಚಿತ್ರಣ, ಸಿರಿವಂತಳೆಂದು ಎಲ್ಲರೂ ಹೊಗಳುತ್ತಿದ್ದ ಮನೆಯ ದೌರ್ಬಲ್ಯತೆಗಳು, ಸಿರಿವಂತರ ಉದ್ಯೋ ಗಸ್ಥ ಮಕ್ಕಳು, ಹಾದಿ ತಪ್ಪುವ ಬಗ್ಗೆ, ಹೀಗೆ ಹಲವು ವಿಷಯಗಳ ಬಗ್ಗೆ ಈ ರಾಧಾದೇವಿಯವರ "ಹೂವಿಗಂಟಿದ ಜೇನು" ಕಾದಂಬರಿ ಬೆಳಕು ಚೆಲ್ಲುತ್ತದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books