ಭಾಸ್ಕರ್ ಆಚಾರ್ಯ ಎನ್ ಅವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ 1954 ಫೆಬ್ರವರಿ 01ರಂದು ಜನಿಸಿದರು. ಆರ್ಚಿ ಅವರ ಕಾವ್ಯನಾಮ. ತಂದೆಯ ಸ್ಮರಣಾರ್ಥ ಡಾ. ಎನ್. ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆಯನ್ನು 1983ರಲ್ಲಿ ನಿರ್ಮಿಸಿದ್ದಾರೆ. ಕೋಟೇಶ್ವರ ರೋಟರಿ ಸಂಸ್ಥೆಯ ಪ್ರಾರಂಭಿಕ ಸದಸ್ಯರಾಗಿದ್ದರು. ಸುವರ್ಣ ಮಹೋತ್ಸವ ಸಮಿತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ಗೌರವಾಧ್ಯಕ್ಷ ಹಾಗೂ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದರು. ‘ದ್ವಂದ್ವ, ವ್ಯವಸ್ಥೆ, ಅಭ್ಯಾಸ, ಪ್ರಯೋಗ, ಪರಿಣಾಮ, ಹೊಸ ಹಾದಿಯಲ್ಲಿ, ಆರ್ಚಿ ಅಂಕಣ’ ಅವರ ಮುಖ್ಯ ಕೃತಿಗಳು. ಪ್ರತಿ ವರ್ಷ ಬೆಂಗಳೂರಿನ ಗೆಳೆಯರ ಬಳಗದ ಸಹಯೋಗದೊಡನೆ ಸಾಹಿತ್ಯಕ ಸ್ಪರ್ಧೆ, ಆಶು ಕವಿತಾ ರಚನಾ ಸ್ಪರ್ಧೆ, ಕಾವ್ಯ ಕಮ್ಮಟಗಳನ್ನು ಏರ್ಪಡಿಸುತ್ತಾರೆ. ಅವರಗೆ ‘ಗೊರೂರು ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ’ ದೊರೆತಿದೆ.