ವಾಣಿ- ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಎಸ್.ಎಸ್.ಎಲ್.ಸಿ. ತನಕ ಶಿಕ್ಷಣ ಪಡೆದಿದ್ದ ಅವರು 1917 ಮೇ 12ರಂದು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಂದೆ ಟಿ. ನರಸಿಂಗರಾಯರು, ತಾಯಿ ಹಿರಿಯಕ್ಕಮ್ಮ.
ಬಿಡುಗಡೆ, ಎರಡು ಕನಸು, ಶುಭ ಮಂಗಳ, ಕಾವೇರಿಯ ಮಡಿಲಲ್ಲಿ, ಹೊಸ ಬೆಳಕು, ಅನಿರೀಕ್ಷಿತ, ಪ್ರೇಮ ಸೇತು, ತ್ರಿಶೂಲ, ಸುಲಗ್ನ ಸಾವಧಾನ, ನೆರಳು ಬೆಳಕು, ಚಿನ್ನದ ಪಂಜರ, ಮನೆಮಗಳು, ಅವಳ ಭಾಗ್ಯ, ಅಂಜಲಿ, ಬಾಳೆಯ ನೆರಳು, ಹೂವು ಮುಳ್ಳು, ಬಲೆ, ಅಲೆನೆಲೆ, ಹಾಲು ಒಡೆದಾಗ ಇವರ ಜನಪ್ರಿಯ ಕಾದಂಬರಿಗಳು. ಅವರ ಹಲವು ಕಾದಂಬರಿಗಳು ಚಲನಚಿತ್ರವಾಗಿ ಪ್ರಸಿದ್ದಿಯನ್ನು ಗಳಿಸಿತು.
ಕಸ್ತೂರಿ, ನಾಣಿಯ ಮದುವೆ, ಬಾಬು ಬರಾನೆ, ಅರ್ಪಣೆ, ಅಪರೂಪದ ಅತಿಥಿ, ಹ್ಯಾಪಿ ಬರ್ತ್‌ಡೇ ಎಂಬ ಕಥಾ ಸಂಕಲನಗಳನ್ನು ರಚಿಸಿದ್ಧಾರೆ.