ಡಾ. ಜಯಂತಿ ಮನೋಹರ್ ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಪ್ರಾಥಮಿಕ ವಿದ್ವಾಂಸವನ್ನು ಪಡೆದಿದ್ದು, ಥಾಯ್ ಲ್ಯಾಂಡ್ ಹಾಗೂ ಕಾಂಬೋಡಿಯಾದಲ್ಲಿ ಭಾರತೀಯರ ಸಂಸ್ಕೃತಿ ಎನ್ನುವುದು ಇವರ ಪ್ರವಾಸ ಕಥನವಾಗಿದೆ. ಜಯಂತಿ ಮನೋಹರ್ 1951 ರ ಅಕ್ಟೋಬರ್ ೨ ರಂದು ಜನಿಸುತ್ತಾರೆ. ಲೇಖಕರ ತಂದೆ ಹೆಸರು ನಾಗರಾಜ್, ತಾಯಿ ಅಮೃತಬಾಯಿ. ಎಸ್.ಬಿ.ಎಂ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸುವ ಲೇಖಕಿ ನಂತರದ ದಿನಗಳಲ್ಲಿ ಭಾಷಾ ಅಧ್ಯಯನಕ್ಕೆ ಪ್ರಮುಖ್ಯತೆಯನ್ನು ನೀಡುತ್ತಾರೆ. ನಾಟಕ ಪ್ರದರ್ಶನಗಳೇ ಇವರ ಆಕರ್ಷಣಾ ಕೇಂದ್ರವಾಗಿತ್ತು. ನಾಟಕ ರಚನಾಕಾರರು ಹಾಗೂ ನಿರ್ದೇಶಕರಾಗಿರುವ ಜಯಂತಿ ಮನೋಹರ್ ಅವರ ಪತಿ ಬಿ. ಮನೋಹರ್ ಜೊತೆಯಾಗಿ ರಂಗಭೂಮಿ, ಟಿ.ವಿ ಧಾರವಾಹಿ, ಅಭಿನಯ, ಸಂಭಾಷಣೆ, ಸಾಂಸಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಿಷಯಗಳ ಮೇಲೆ ಸಾಕ್ಷ್ಯ ಚಿತ್ರಗಳ ನಿರ್ಮಾಣಗಳಲ್ಲಿ ತೊಡಗಿಸಿಕೊಂಡು ಸಕ್ರಿಯರಾಗಿದ್ದರೆ. 1982ರಲ್ಲಿ ನಿರ್ಮಾಣ ಮಾಡಿರುವ “ಗೋಕಾಕ್ ಚಳವಳಿಯ ಸಾಕ್ಷ್ಯಚಿತ್ರವು ಈ ಚಾರಿತ್ರಿಕ ಹೋರಾಟದ ಬಗ್ಗೆ ದಾಖಲೆಯಾಗಿರುವ ಏಕಮೇವ ಚಿತ್ರವಾಗಿದೆ. ಸೀತಾಂತರಂಗ ಅವರ ಪ್ರಮುಖ ಕಾದಂಬರಿ. ಅನುಭವಾತ್ಮಕ ಕಲಿಕೆಯ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿದ್ವತ್ ಪೂರ್ಣ ಪ್ರಬಂಧಗಳ ಮಂಡನೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಸಾಹಿತ್ಯ ಸಂಸ್ಕೃತಿ ಕುರಿತು ದೃಶ್ಯಕಾವ್ಯ ಉಪನ್ಯಾಸ ನೀಡಿದ್ದಾರೆ. ಟಿ.ವಿ. ಧಾರಾವಾಹಿಗಳಲ್ಲಿ ಅಭಿನಯ ಮತ್ತು ಸಂಭಾಷಣೆಗಳ ರಚನೆಗಳೊಂದಿಗೆ, ಮೂರು ದಶಕಗಳಿಂದಲೂ ಪತಿ ಬಿ.ಎಸ್. ಮನೋಹರ್ ಅವರೊಂದಿಗೆ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಷಯಗಳ ಮೇಲೆ ಸಾಕ್ಷ್ಯಚಿತ್ರಗಳ ನಿರ್ದೇಶನ, ನಿರ್ಮಾಣ ಮಾಡುತ್ತಿದ್ದಾರೆ. ರಾವಣಾಸುರನ ಕನಸು ಎಂಬ ನಾಟಕ, ಭಾರತೀಯ ಚಿಂತನೆಯಲ್ಲಿ ಮನೋವೈಜ್ಞಾನಿಕ ತತ್ವಗಳು ಎಂಬ ವಿಚಾರಧಾರೆಯುಳ್ಳ ಕೃತಿ ರಚಿಸಿದ್ದಾರೆ. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಶ್ರೀ ಎಂ.ಜಿ.ರಂಗನಾಥನ್ ಸ್ಮಾರಕ ಪುಸ್ತಕ ಪ್ರಶಸ್ತಿ, ಶ್ರೀ ಟಿ.ವಿ. ಕಪಾಲಿ ಶಾಸ್ತಿ ಪುರಸ್ಕಾರ, ಅಜಂತಾ ರಾಷ್ಟರತ್ನ ಪ್ರಶಸ್ತಿಗಳು ಲಭಿಸಿವೆ. ಭಾರತೀಯರ ಚಿಂತನೆಗಳಿರುವ ಅನೇಕ ಗ್ರಂಥಗಳ ಅಧ್ಯಯನದ ಜೊತೆಗೆ ವೇದ ಮಂತ್ರಗಳ ಅಧ್ಯಯನ ನಡೆಸಿ ʼ ಋಗ್ವೇದದಲ್ಲಿ ಸಂಕ್ಷೇತಾರಗಳು- ಸಿದ್ದಾಂಜನದ ಹಿನ್ನೆಲೆಯಲ್ಲಿ ಒಂದು ವಿಶೇಷ ಅಧ್ಯಯನʼ ಎಂಬ ಪ್ರೌಢ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ಖುಗ್ವೇದವನ್ನು ಏಕೆ ಒದಬೇಕು? ಎನ್ನುವ ಕೃತಿಯು 2001 ರಲ್ಲಿ ಪ್ರಕಟವಾಗಿರುತ್ತದೆ. ನಂತರ ಬರೆದ ಕೃತಿ ಖುಗ್ವೇದ ಅಗ್ನಿ ಮಂತ್ರವಾಗಿದೆ.