ಕೋಲಾರದ ಮುಡಿಯ ನೂರಿನ ನೈಷಧಂ ಇಂಗ್ಲಿಷ್ ಸ್ನಾತಕೋತ್ತರ ಪದವೀಧರರು. ಸರ್. ಎಂ. ವಿ. ಕಾಲೇಜು ಮತ್ತು ಎ. ಪಿ. ಎಸ್. ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಮಾಡಿ ಈಗ ನಿವೃತ್ತಿಹೊಂದಿದ್ದಾರೆ. ವಿಭಿನ್ನ ಮಾಧ್ಯಮಗಳಿಗನುಸಾರವಾಗಿ ಬರೆಯುವ ಕಲೆಯನ್ನು ಕರಗತವಾಗಿಸಿಕೊಂಡಿರುವ ಇವರು ಪ್ರಬುದ್ಧ ಅನುವಾದಕರು. ಕೃತಿಗಳು : ‘ಸುಪ್ತ ಚೇತನ ಕ್ರಾಂತಿ' ಕಾವ್ಯ, 'ಎಳರಂಗ' ನಾಲ್ಕು ಕಿರುನಾಟಕಗಳು, 'ಸೊಡರು ನುಂಗುವ ಕತ್ತಲು', 'ಸಂಪನ್ನ ಸಮಾಜ', 'ಕಪ್ಪಿ' ರಂಗ ಪ್ರಯೋಗ ಕೃತಿಗಳು. 'ಕಪ್ಪು ವಜ್ರಗಳು ಮತ್ತು ಚೆಂಗುಲಾಬಿ' (ದಕ್ಷಿಣ ಆಫ್ರಿಕದ ಹೋರಾಟ ಕವನಗಳು), 'ಚಿನ್ನದುಳಿ ಮತ್ತು ಕಲ್ಲುಕುಟಿಗರು' (16 ಚೀನೀ ಪ್ರಾತಿನಿಧಿಕ ಜಾನಪದ ಕಥೆಗಳು), 'ಇನ್ ದಿ ಲ್ಯಾಂಡ್ ಆಫ್ ದಿ ಬುದ್ಧ', 'ಟುವರ್ಡಸ್ ಬೋಲೇನಾಥ್' (ಪ್ರವಾಸ ಕಥನ), ಅನುವಾದ ಕೃತಿಗಳು