ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯ ನಟ ಅಶೋಕ್ ಬೆಂಗಳೂರಿನ ಆನೇಕಲ್ ಮೂಲದವರು. (ಜನನ: 1951 ಸೆಪ್ಟೆಂಬರ್ 12ರಂದು) ತಂದೆ ಲಕ್ಷ್ಮಿ ನರಸಿಂಹಯ್ಯ, ತಾಯಿ ಪುಟ್ಟಮ್ಮ. ತಮ್ಮ ಕಲಾತ್ಮಕ ಪಾತ್ರಗಳಿಗೆ ಅಶೋಕ್ ಅವರು ಹೆಸರಾಗಿದ್ದು ಮಾತ್ರವಲ್ಲದೆ ಹಲವು ಸಮಾಜಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಪದವಿ ಮುಗಿದ ನಂತರ ಮದ್ರಾಸ್ ಇನ್‌ಸ್ಟಿಟ್ಯೂಟ್ ಗೆ ಸೇರಿ, ನಟನಾ ತರಬೇತಿ ಪಡೆದರು. `ಹೆಣ್ಣು ಸಂಸಾರದ ಕಣ್ಣು' ಚಿತ್ರದಿಂದ ನಟನೆ ಆರಂಭಿಸಿ, ಸನಾದಿ ಅಪ್ಪಣ್ಣ,ರಂಗನಾಯಕಿ,ಚೆಲ್ಲಿದ ರಕ್ತ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕರ್ನಾಟಕ ಚಲನಚಿತ್ರ ಕಲಾವಿದ ಮತ್ತು ಕಾರ್ಮಿಕ ವರ್ಗದ ನಾಯಕರಾಗಿಯೂ ಪ್ರಸ್ತುತರಾಗಿದ್ದಾರೆ.. ನಟನೆಯ ಜೊತೆಗೆ ಈಗ ಬರವಣಿಗೆಯಲ್ಲೂ ನಿರತರಾಗಿದ್ದಾರೆ.