ಜುಬೇದಾ ನಾಯಕ್.ಅವರು ಹುಟ್ಟಿದ ಊರು ಘಟಪ್ರಭಾ. ಪ್ರಸ್ತುತ ಹಾವೇರಿಯಲ್ಲಿ ನೆಲಸಿದ್ದಾರೆ. ಜುಬೇದಾ ಅವರ ತಂದೆಯ ಹೆಸರು, ಹುಸೇನ್ ಸಾಬ್ ಶೇಖ್. ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಜುಬೇದಾರವರು ಹಿಂದಿ ಭಾಷೆಯ ಪ್ರವೀಣ ಪದವಿ ಪಡೆದಿದ್ದಾರೆ. ಇವರು ಹಾವೇರಿ ವಲಯದ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ತಮ್ಮ 32 ವರ್ಷಗಳ ಸೇವಾವಧಿಯಲ್ಲಿ ಸುಮಾರು ಹತ್ತು ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಸೇವೆ ಮಾಡಿದ್ದಾರೆ. "ಹದಿಹರೆಯದ ಪ್ರೀತಿ" ಇವರ ಚೊಚ್ಚಲ ಕೃತಿ, ಎರಡನೇ ಕೃತಿ "ಕಥೆಯಲ್ಲವಿದು ಜೀವನ" ಕಾದಂಬರಿಯಾಗಿದೆ.