ಲೇಖಕ ಪರಮ್ ಭಾರದ್ವಾಜ್ ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಆಡಿ ಬೆಳೆದದ್ದು ಕಾರ್ಕಳದ ಅಜ್ಜಿ ಮನೆಯಲ್ಲಿ. ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಬಿ.ಕಾಂ.. ಎಂ.ಪಿ.ಎಂ. ಕಾಲೇಜಿನಲ್ಲಿ ಎಂ.ಕಾಂ., ಆಳ್ವಾಸ್ ಕಾಲೇಜಿನಲ್ಲಿ B.Ed ಮುಗಿಸಿ ಅದೇ ಕಾಲೇಜಿನಲ್ಲೀ ಪದವಿ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದಾರೆ.
ಕನ್ನಡ ಆಲ್ಲಂ ಹಾಡಿನ ರಚನೆ, ಸಂಗೀತ, ನಟನೆ ಹಾಗೂ ನಿರ್ಮಾಣ ಮಾಡಿರುವ ಇವರು ಹಲವು ಸಿನಿಮಾಗಳಿಗೆ ಚಿತ್ರಗೀತೆ ಬರೆದಿದ್ದಾರೆ. 27ರ ಹರೆಯದ ಈ ಶಿಕ್ಷಕ, ಲೇಖಕ, ಕವಿ, ಕಲಾವಿದ ನಾಗಿರುವ ಪರಮ್ ಕಾರ್ಯಕ್ರಮ ನಿರೂಪಕರು ಹೌದು. ‘Param Event Management’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ‘ಕರ್ಣ ಕುಂಡಲಧಾರಿಣಿ’ ಅವರ ಚೊಚ್ಚಲ ಕೃತಿ 2020ರಲ್ಲಿ ಪ್ರಕಟವಾಗಿದೆ.