ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ.
ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು.
ಕಥಾಸಂಕಲನಗಳು- ಕಣ್ಮಣಿ, ರೂವಾರಿಯ ಲಕ್ಷ್ಮಿ, ನೀರಿಗೆ ನೈದಿಲೆ ಶೃಂಗಾರ, ಏಳುಸುತ್ತಿನ ಮಲ್ಲಿಗೆ. ಗಿರಿಧಾಮ, ಒಡಲು, ಪುಷ್ಪಕ, ಕಲ್ಲೋಲ(ನಾಟಕ)
ದಿನಕ್ಕೊಂದು ಕಥೆ,(ಶಿಶು ಸಾಹಿತ್ಯ) ವೈದ್ಯಕೀಯ-ಕೆೆಂಪಮ್ಮನ ಮಗು, ಆರೋಗ್ಯ ದರ್ಶನ, ತಾಯಿ-ಮಗು, ಕೇಳು ಕಿಶೋರಿ, ಸ್ತ್ರೀ ಸ್ವಾತಂತ್ರ್ಯ ಸಂಹಿತೆ, ಆರೋಗ್ಯ ಭಾಗ್ಯಕ್ಕೆ ವ್ಯಾಯಾಮ, ಸ್ನೇಹಯಾತ್ರೆ(ಪ್ರವಾಸ ಕಥನ), ಶುಭಕಾಮನೆ (ವನಿತಾ ವಾಣಿ), ದಾಂಪತ್ಯ ದೀಪಿಕೆ(ವಿಜ್ಞಾನ), ವಧುವಿಗೆ ಕಿವಿಮಾತು (ವಿಜ್ಞಾನ)
1960ರಲ್ಲಿ ರೂವಾಯಿಯ ಲಕ್ಷ್ಮೀ ಕಥಾ ಸಂಕಲನಕ್ಕೆ ಹಾಗೂ 1971ರಲ್ಲಿ ಆರೋಗ್ಯ ದರ್ಶನ ವೈದ್ಯಕೀಯ ಪುಸ್ತಕಕ್ಕೆ ರಾಜ್ಯ ಸರ್ಕಾರದ ಬಹುಮಾನ ಬಂದಿದೆ. 1978ರಲ್ಲಿ ಸಾಹಿತ್ಯ ಅಕಾಡೆಮಿಯ ಬಹುಮಾನ ಹಾಗೂ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ದೊರೆತಿದೆ. ಇವರ ಅನೇಕ ಕಾದಂಬರಿಗಳು ಇಂಗ್ಲಿಷ್, ಉರ್ದು, ಜರ್ಮನಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದೀ ಭಾಷೆಗಳಿಗೆ ಅನುವಾದಗೊಂಡಿವೆ. 1991ರ ಫೆಬ್ರುವರಿ 15ರಂದು ನಿಧನರಾದರು.