‘ಅಲೆಗಳು’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ನಾಲ್ಕು ಮಕ್ಕಳು ರವಿ, ಕೇಶವ, ನಾಗರಾಜ, ನಳಿನಿ ಇವರ ಜೊತೆಗಿನ ತುಂಬು ಕುಟುಂಬ ಶ್ರೀಕಂಠಯ್ಯ ಸಾವಿತ್ರಮ್ಮನವರದು. ದೊಡ್ಡ ಸಂಸಾರ ಮಕ್ಕಳು ಬೆಳೆಯುತ್ತಾ ಬಂದಾ ಹಾಗೆ ಅವರವರದೇ ಆಶೋತ್ತರಗಳು. ಮಗಳ ಮದುವೆ ಮುಗಿಸಿ ಅವಳನ್ನು ಗಂಡನ ಮನೆಗೆ ಕಳಿಸಿದ ಮೇಲೆ ನೆಮ್ಮದಿ ಎನಿಸಿದರೂ ಶ್ರೀಕಂಠಯ್ಯನವರಿಗೆ ಇದ್ದುದು ನಾಗರಾಜನ ಯೋಚನೆ. ಏಕೆಂದರೆ ಅವನು ಎಲ್ಲರಂತೆ ಸಾಮಾನ್ಯ ಹುಡುಗನಲ್ಲ. ತಂದೆ ಸುಮ್ಮನೇ ಮನೆಯಲ್ಲಿ ಕೂತಿರಬೇಕು ಎಂದು ಕೇಶವ ತಂದೆಯನ್ನು ಅಂಗಡಿಯ ಲೆಕ್ಕ ಬರೆಯಲು ಕಳಿಸಿದ್ದು ರವಿಗೆ ಇಷ್ಟವಾಗಲಿಲ್ಲ. ಈ ವಿಚಾರದಲ್ಲಿ ಅಣ್ಣ ತಮ್ಮಂದಿರಿಗೆ ಘರ್ಷಣೆ ಉಂಟಾಗುತ್ತದೆ. ದೊಡ್ಡ ಸಂಸಾರ ಸಾಗರದಲ್ಲಿ ಆಗಾಗ ಅಲೆಗಳು ಮೂಡುತ್ತಲೇ ಇರುತ್ತವೆ. ಈ ಅಲೆಗಳಲ್ಲಿ ಈಜಿ ಸುಖ ಎನ್ನುವ ದಡವನ್ನು ಈ ಪಾತ್ರಗಳು ಹೇಗೆ ಸೇರುತ್ತವೆ ಎನ್ನುವ ಕುತೂಹಲದ ವಿಷಯ ಅಲೆಗಳು ಕಾದಂಬರಿಯದು.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE