ಲೇಖಕ ಎ.ಎನ್ ಪ್ರಸನ್ನ ಅವರ ಕಾದಂಬರಿ ‘ಅಲೆಗಳು’. ವಿಭಿನ್ನ ಕಥಾ ಹಂದರವುಳ್ಳ ಈ ಕಾದಂಬರಿಯು ಪಾತ್ರ ವಿಶೇಷತೆಗಳ ಮೂಲಕವೂ ಹೆಸರು ಮಾಡಿದೆ. ಕೃತಿಯು ಕಾಲದ ವಸ್ತುನಿಷ್ಠೆ ಹಾಗೂ ಕಾಲದ ಸವಾಲಿನ ಕುರಿತು ಮಾತನಾಡುತ್ತದೆ. ಅಷ್ಟೇ ಅಲ್ಲದೆ ಗಂಡು ಹೆಣ್ಣಿನ ಸಂಬಂಧದ ಬದಲಾವಣೆಯು ಸಮುದಾಯದ ಸ್ವರೂಪದಲ್ಲಿಯೇ ಬದಲಾವಣೆಗಳನ್ನು ತಂದು ಬಿಡುತ್ತದೆ ಎನ್ನುತ್ತದೆ. ಸಾಮಾಜಿಕ ಚೌಕಟ್ಟು, ಲೋಕ ಒಪ್ಪದಿದ್ದರೂ ನಮಗೆ ಬೇಕಾದದ್ದನ್ನು ಪಡೆಯುವ ಸನ್ನಿವೇಶ ಹಾಗೂ ಅದನ್ನು ಮೌಲ್ಯವಾಗಿಸಿಕೊಂಡಿರುವ ವಾಸ್ತವ ಎರಡೂ ನಮ್ಮಲ್ಲಿ ಎಂದಿನಿಂದಲೂ ಮಾನವ ನಾಗರಿಕತೆಯ ಸವಾಲೇ ಆಗಿದೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಮರಣ ಹೇಗೆ ವ್ಯಕ್ತಿಯ ಬದುಕಿಗೆ ಕನ್ನಡಿಯಾಗುತ್ತದೆ ಎನ್ನುವ ಜೊತೆಗೆ ಬದುಕಿನ ಪರಮಸತ್ಯ ಅರಿತವನಂತೆ ಪ್ರಬುದ್ಧತೆಯಿಂದ ಅದನ್ನು ಸ್ವೀಕರಿಸುತ್ತಾನೆ ಎನ್ನುವುದನ್ನು ತಿಳಿಸಲಾಗಿದೆ. ಇನ್ನು ಪ್ರಸನ್ನರ ಭಾಷೆಯಲ್ಲಿ ಕಾವ್ಯದ ಆಕರ್ಷಣೆಯೂ ಇದೆ. ಒಂದಕ್ಕಿಂತ ಹೆಚ್ಚಿನ ಅರ್ಥಗಳಿಗೆ, ರೂಪಕಾರ್ಥಗಳಿಗೆ ಚಾಚಿಕೊಳ್ಳುವ ಕಾವ್ಯಶಕ್ತಿಯೂ ಇದೆ. ಇಲ್ಲಿ ಪರಿಸರದ ಮಾನವ ಜೀವಿಗಳೂ ಸಸ್ಯಜೀವಿಗಳೂ ಮಾತನಾಡುತ್ತವೆ. ಓದುಗರ ಅನುಭವದ ಎಲ್ಲೆಗಳನ್ನು ವಿಸ್ತರಿಸುತ್ತವೆ.
ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...
READ MORE