ಯಕ್ಷಗಾನ ಪ್ರಸಂಗಕರ್ತೆ, ಲೇಖಕಿ ದಿವ್ಯಾ ಶ್ರೀಧರ ರಾವ್ ಅವರು ಮೂಲತಃ ಕುಂದಾಪುರದವರು. 1986 ಜೂನ್ 21 ರಂದು ತೀರ್ಥಹಳ್ಳಿಯಲ್ಲಿ ಹುಟ್ಟಿದ್ದು. ತದನಂತರ ವಿದ್ಯಭ್ಯಾಸ ಕುಂದಾಪುರದಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದು. ಹೈಸ್ಕೂಲಿಗೆ ಮಂಗಳೂರಿನ ಮೂಲ್ಕಿಯ ಮೊರಾರ್ಜಿ ವಸತಿ ಶಾಲೆ ಸೇರಿ ಮತ್ತೆ ಕಾಲೇಜಿಗೆ ಬೆಂಗಳೂರಿನ ವಾಸವಿ ಕಾಲೇಜಿಗೆ ಸೇರಿ ಬಿಬಿಎಂ ಪದವಿಯನ್ನು 2007 ರಲ್ಲಿ ಮುಗಿಸಿದರು.
ಕಾಲೇಜು ದಿನಗಳಲ್ಲಿ ಭಾಷಣ ಹಾಗೂ ಪ್ರಭಂಧಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದರೂ ಬರವಣಿಗೆ ಕಡೆ ಹೆಚ್ಚಿನ ಗಮನವಿರಲಿಲ್ಲ. ತಂದೆಯ ಹೆಸರು ಶ್ರೀಧರ್ ರಾವ್ ಹಾಗೂ ತಾಯಿ ಪದ್ಮಾವತಿ ಎಸ್ ರಾವ್. ಗಂಡನ ಹೆಸರು ಅಶ್ವಿನ್ ಹಾಗೂ ಮಗು ಆರ್ಯಸಮರ್ಥ.
ಸುಮಾರು 2017 ರಲ್ಲಿ ಯಕ್ಷಗಾನದಲ್ಲಿ ಹಿಂದುಳಿದ ಕಲಾವಿದರು ಹಾಗೂ ಕಲಾವಿದರ ಮಕ್ಕಳನ್ನು ಓದಿಸುವ ಸಲುವಾಗಿ ‘ಯಕ್ಷ ಯಶಸ್ವ’ಎಂಬ ಯಕ್ಷಗಾನಕ್ಕೆ ಸಂಬಂಧಿಸಿದ ಟ್ರಸ್ಟ್ ಅನ್ನು ಸ್ಥಾಪಿಸಿ ಒಂದಷ್ಟು ಕಲಾವಿದರಿಗೆ ಹಾಗೂ ಅವರ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
2018 ರಲ್ಲಿ ಮೊದಲ ಅಂಕಣ ಬರಹವಾದ ‘ಓ ಹೆಣ್ಣೇ ನೀನೆಷ್ಟು ಗಟ್ಟಿಗಿತ್ತಿ’ ಎಂಬ ಸರಣಿ ಲೇಖನ ಬೆಂಗಳೂರು ಮಿರರ್ ಎಂಬ ಪಾಕ್ಷಿಕದಲ್ಲಿ ಪ್ರಕಟವಾಯಿತು.
2019 ರಲ್ಲಿ ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗವೊಂದನ್ನು ತಂದು ಸಾಮಾಜಿಕ ಪ್ರಸಂಗಗಳು ಮಾತ್ರವಲ್ಲ ಪೌರಾಣಿಕದಲ್ಲೂ ನಾವು ಪ್ರಸಂಗಕ್ಕೆ ತರಲಾಗದ ಕತೆಗಳಿವೆ ಎಂದು ತೋರಿಸಿಕೊಟ್ಟವರು.
2020 ರಲ್ಲಿ ಹಾದಿ ತಪ್ಪುತ್ತಿರುವ ಹದಿವಯಸ್ಸಿನ ಹೆಣ್ಣುಮಕ್ಕಳಿಗಾಗಿ ಹಾಗೂ ಮಕ್ಕಳನ್ನು ಸಾಕುವ ತಾಯಿಯಂದಿರಿಗಾಗಿ ‘ಆ ನೀಲಿ ಕಂಗಳ ಹುಡುಗಿ’ ಎಂಬ ಕಾದಂಬರಿಯನ್ನು ಹೊರತಂದಿದ್ದಾರೆ.
2020 ರಲ್ಲಿ ನ್ಯೂಸಿಕ್ಸ್ ಡಾಟ್ ಕಾಮ್ ಎಂಬ ಪತ್ರಿಕೆಯಲ್ಲಿ ‘ಯಕ್ಷ ಚೌಕಿ’ ಎಂಬ ಯಕ್ಷಗಾನ ಕಲಾವಿದರ ಕುರಿತಾದ ಅಂಕಣ ಬರಹ ಪ್ರಕಟವಾಗಿತ್ತು. ಸುಮಾರು 35 ಕಲಾವಿದರ ಬಗ್ಗೆ 35 ಲೇಖನಗಳೊಂದಿಗೆ ಬಂದ ಈ ಬರಹ ಹೆಚ್ಚಿನ ಓದುಗರನ್ನು ತಲುಪುವಂತಾಗಿದೆ.
ಕುವೆಂಪು ಸಂಘದವರು ಏರ್ಪಡಿಸಿದ್ದ ಕತಾ ಸ್ಪರ್ಧೆಯಲ್ಲಿ ಒಂದು ಕತೆ ‘ಸಾಹಿತ್ಯ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದು 2020 ರಲ್ಲಿ. ವೇಶ್ಯಾವಾಟಿಕೆಯೆಂದರೆ ಸುಲಭದ ಮಾತಲ್ಲ. ವೇಶ್ಯಾವಾಟಿಕೆ ನಡೆಸುವ ಪ್ರತಿ ಹೆಣ್ಣು ಮಗಳ ಆಂತರ್ಯ ಹಾಗೂ ಅವಳಿಗೆ ಹುಟ್ಟುವ ಮಗು ಸಮಾಜದಲ್ಲಿ ಎದುರಿಸುವ ಸವಾಲುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕಾದಂಬರಿ ‘ಮೌನ ಧ್ವನಿಸಿತು’ 2021 ರಲ್ಲಿ ಬಿಡುಗಡೆಯಾಯಿತು.
2021 ರಲ್ಲಿ ಮೈಸೂರಿನಲ್ಲಿ ನಡೆಸಿದ ಕತಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಒಂದು ಕತೆಗೆ ‘ಸೃಜನಶೀಲ ಕತಾ ಪ್ರಶಸ್ತಿ’ ದೊರೆತಿದೆ.
2022ರಲ್ಲಿ ಪ್ರಕಟಗೊಂಡ ಇವರ ಕಥಾ ಸಂಕಲನ ನಿತ್ಯ ಜೀವನದ ಸತ್ಯ ಕಥೆಗಳು ಹಾಗೂ ಕಿರು ಕಾದಂಬರಿ ಗಾಂಧಾರಿಯ ಭಾವ ಸಂಘರ್ಷ ‘ಮಿಂಚದ ಮಿಂಚು’.