ಮಹಾಬಿಂದು

Author : ಎಚ್.ಟಿ. ಪೋತೆ

Pages 168

₹ 195.00




Year of Publication: 2022
Published by: ಅಂಕಿತ ಪುಸ್ತಕ
Address: ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು, 53, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 004
Phone: 08026617100

Synopsys

ಲೇಖಕ ಎಚ್.ಟಿ.ಪೋತೆ ಅವರ ಕಾದಂಬರಿ ಮಹಾಬಿಂದು. ಕೃತಿಯಲ್ಲಿ ಸಾಹಿತಿ ಮಲ್ಲೇಪುರಂ ಜಿ ವೆಂಕಟೇಶ್ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದು, ಪೋತೆಯವರು ಹಿಂದಿನ ಕಥನಗಳ ನೇಯ್ಗೆಯನ್ನು ಬಳಸಿಕೊಂದು ಇಂದಿನ ಮಾನವೀಯ ಸಂಬಂಧಗಳನ್ನು ಅನ್ವೇಷಿಸುತ್ತಿದ್ದಾರೆ. ಇಂಥ ಸಂಬಂಧಗಳ ಸೂಕ್ಷ್ಮ ಹುಡುಕಾಟದ ಫಲವೇ ‘ಮಹಾಬಿಂದು’ ಕಾದಂಬರಿ ಎಂಬುದಾಗಿ ಹೇಳಿದ್ದಾರೆ.

ಕೃತಿಯ ಲೇಖಕರ ಮಾತಿನಲ್ಲಿ, ಇತ್ತೀಚಿನ ದಿನಗಳಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡುತ್ತಿರುವ ಪ್ರಶ್ನೆ ‘ಮನುಷ್ಯ ಸಂಬಂಧ’ ಹಾಗೆಂದರೇನು? ಎಂಬುದು. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜನ್ಮತಾಳಿ ಇಡೀ ಜಗತ್ತಿನಲ್ಲೇ ಅಲ್ಲೋಲ-ಕಲ್ಲೋಲವನ್ನುಂಟು ಮಾಡಿದ ಕೊರೊನಾ ಎನ್ನುವ ಮಹಾರೋಗ ಮನುಷ್ಯ ಸಂಬಂಧಗಳ ಟೊಳ್ಳುತನವನ್ನು ಮತ್ತಷ್ಟು ನಿಚ್ಚಳವಾಗಿ ತೆರೆದಿಟ್ಟಿತು. ಮಾನವ ಸಂಬಂಧಗಳು ಯಾವ ಜೀವಪರ ಕಾಳಜಿಯಿಂದ ಕೂಡಿರಬೇಕಾಗಿತ್ತೋ, ಅಂಥ ಕಾಳಜಿಗಳಿಂದ ದೂರವುಳಿದವು. ಕೇವಲ ಸ್ವಾರ್ಥಪರತೆಯಿಂದ ತುಂಬಿದವು. ಸ್ವಭಾವದಲ್ಲಿ ಮನುಷ್ಯ ರಾಗಬೇಕಾದವರನ್ನು ಮನುಷ್ಯನ ಸಣ್ಣತನಗಳು ಆಕಾರದಲ್ಲಿ ಮಾತ್ರ ಮನುಷ್ಯನನ್ನಾಗಿಸಿವೆ. ಮನುಷ್ಯನನ್ನು ಆವರಿಸಿರುವ ಬೌದ್ಧಿಕ ಲೋಲುಪತೆಯು ಭ್ರಮಾತ್ಮಕ ಲೋಕವನ್ನು ಸೃಷ್ಟಿಸಿದೆ. ಮನುಷ್ಯ ಸಂಬಂಧ ಗಳಲ್ಲಿರಬೇಕಾದ ನಂಬಿಕೆ, ನಿಷ್ಠೆಗಳು ಕಾಣೆಯಾಗಿ ವಿಕಾರಗೊಂಡ ಸಂಬಂಧಗಳು ಅವಿವೇಕದ ಸಂಬಂಧಗಳಂತೆ ಭಾಸವಾಗುತ್ತಿವೆ. ಇಂತಹ ಸಂಬಂಧಗಳ ಕುರಿತಂತೆ ಆಲೋಚಿಸಲು ನಮಗೆ ಕೊರೊನಾದ ಸಾಂಕ್ರಾಮಿಕ ಸಂದರ್ಭ ಸ್ಫೂರ್ತಿಯಾದಾಗಲೂ, ಹಳಸಿದ ಅನ್ನಕ್ಕೆ ಒಗ್ಗರಣೆ ಕೊಟ್ಟಂತಿರುವ ಮನುಷ್ಯ ಸಂಬಂಧಗಳು ರುಚಿಯನ್ನು ಕಳೆದು ಕೊಂಡು ಶತಮಾನಗಳೇ ಕಳೆದಿವೆ. ಇಂತಹ ರುಚಿರಾಹಿತ್ಯ ಸಂಬಂಧಗಳ ಕುರಿತು ನನ್ನ ಮನಸ್ಸಿನಲ್ಲಿದ್ದ ಸಂಘರ್ಷಗಳು ಅಕ್ಕರ ರೂಪದಲ್ಲಿ ಹೊರಬರಲಿಕ್ಕೆ ಕಾರಣರಾದವರು ಮಾತೋಶ್ರೀ ಶ್ರೀಮತಿ ರಾಧಾಬಾಯಿ ಖರ್ಗೆಯವರು. ಲೋಕಾಭಿ ರಾಮದ ಮಾತಿನ ನಡುವೆ ಸುಳಿದ ‘ಮನುಷ್ಯ ಸಂಬಂಧ’ದ ಮಾತು ನನ್ನ ಮನಸ್ಸಿನ ತುಂಬ ತುಂಬಿಕೊಂಡು ನನ್ನನ್ನು ಗಾಢ ಚಿಂತನೆಗೆ ಹಚ್ಚಿತು. ಈ ಕುರಿತು ಚಿಂತಿಸುತ್ತಿರುವಾಗಲೇ ಅಸಂಖ್ಯ ವೈಚಾರಿಕ ಆಲೋಚನೆಗಳು ಸುಳಿದು ಹೋದವು. ಅವುಗಳನ್ನು ಹಾಗೆಯೇ ಹೇಳದೆ ಕೊಂಚ ಸೃಜನಶೀಲತೆಯನ್ನು ಬೆರೆಸಿ ಹೇಳೋಣವೆಂದು ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಅದಕ್ಕಾಗಿಯೇ ಇದಕ್ಕೆ ‘ಕಾದಂಬರಿ’ ಎಂದಿದ್ದೇನೆ. ನನ್ನ ಏಕಾಂತ ಮತ್ತು ಲೋಕಾಂತಗಳ ಆಲೋಚನೆಗಳನ್ನು ಮುಖಾ ಮುಖಿಯಾಗಿಸಿದ ಈ ಪ್ರಯತ್ನ ಓದುಗರಲ್ಲಿ ಮತ್ತಷ್ಟು ವಿಕಾಸಗೊಂಡರೆ ನನ್ನ ಪ್ರಯತ್ನಕ್ಕೆ ಕೊಂಚ ಯಶಸ್ಸು ಸಿಕ್ಕೀತು ಎಂಬುದಾಗಿ ಹೇಳಿದ್ದಾರೆ.

About the Author

ಎಚ್.ಟಿ. ಪೋತೆ

ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...

READ MORE

Related Books