ಶ್ರೀದೇವಿ ಕಳಸದ ಅವರು ಲೇಖಕಿ ಹಾಗೂ ಪರ್ತಕರ್ತೆ. ತಂದೆ ಡಾ. ದೇವದಾಸ ಕಳಸದ, ತಾಯಿ-ಕೌಸಲ್ಯ ಕಳಸದ .ಜನನ 25-08-1981 ರಂದು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹಿಂದೂಸ್ತಾನಿ ಸಂಗೀತ ಕಲಾವಿದೆ. ಸಂಗೀತ ಶಿಕ್ಷಕಿಯಾಗಿ ಪಾಠ ಹೇಳಿ ಕೊಡುತ್ತಾರೆ. ಭಾವಗೀತೆಗಳಿಗೆ ಸ್ವರ-ಸಂಯೋಜಿಸಿ ಹಾಡುವುದು ಹಾಗೂ ಕಾರ್ಯಕ್ರಮ ನಿರೂಪಕಿಯೂ ಹೌದು. ಚಿತ್ರಕಲೆ ಇವರ ಹವ್ಯಾಸ. ಹಿನ್ನೆಲೆ ಧ್ವನಿ, ಸ್ಕ್ರಿಪ್ಟಿಂಗ್, ಕಾನ್ಸೆಪ್ಟ್ ಕ್ರಿಯೇಷನ್, ಇಲ್ಲಸ್ಟ್ರೇಷನ್ ವಲಯದಲ್ಲಿ ಜಾಣ್ಮೆ ಇದೆ.
ಹಾಡಾಗದ ಸಾಲುಗಳು -ಇವರ ಮೊದಲ ಕವನ ಸಂಕಲನ. ಮೈಸೂರು ವಿವಿಯ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಯೋಜನೆಗೆ ‘ನೀರು ಹೇಳುವ ನೀರೆಯರ ಕಥೆಗಳು’ ವಿಷಯವಾಗಿ ಸಂಶೋಧನೆ ನಡೆಸುತ್ತಿದ್ದಾರೆ.