ಓದುಗ ಕಾದಂಬರಿಯ ಕಥಾಪಾತ್ರಗಳಲ್ಲಿ ಒಬ್ಬನಾಗಿ ಓದುವ, ಕಾದಂಬರಿ ಮುನ್ನಡೆಯವ ರೀತಿಯಲ್ಲಿ ಓದಿಸಿಕೊಂಡು ಹೋಗುವ ವಿವೇಕ ಶಾನಭಾಗರ ಊರು ಭಂಗ ಕಾದಂಬರಿಯು ಕುಟುಂಬ ಆಧಾರಿತ ಕಾದಂಬರಿಯಾಗಿದೆ. ಜೀವನದಲ್ಲಿ ಸಿಗುವ ಸಾವಿರಾರು ಅವಕಾಶಗಳು, ಅದರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಬೇಕು ಎಂದಾಗ ಆಗುವ ಒತ್ತಡ, ಆ ಒತ್ತಡವನ್ನು ನಿಭಾಯಿಸುವ ರೀತಿ ಇವೆಲ್ಲವೂ ಈ ಕಾದಂಬರಿಯಲ್ಲಿ ದೊರೆಯುತ್ತವೆ.
ವಿವೇಕ ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನೂ ಏಳು ವರ್ಷ ಕಾಲ ನಡೆಸಿದರು. ಹೊಸ ಬಗೆಯ ಕಥೆ ಕಟ್ಟುವ ಅವರು ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲರು. ಅವರ ’ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ. ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ...
READ MORE