About the Author

ವಿವೇಕ  ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನೂ ಏಳು ವರ್ಷ ಕಾಲ ನಡೆಸಿದರು. ಹೊಸ ಬಗೆಯ ಕಥೆ ಕಟ್ಟುವ ಅವರು ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲರು. ಅವರ ’ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ.

ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ಸಂಸಾರ, ಘಾಚರ್ ಘೋಚರ್ (ಕಥಾ ಸಂಕಲನಗಳು), ಇನ್ನೂ ಒಂದು, ಒಂದು ಬದಿ ಕಡಲು, ಊರುಭಂಗ (ಕಾದಂಬರಿಗಳು), ಸಕ್ಕರೆ ಗೊಂಬೆ, ಬಹುಮುಖಿ (ನಾಟಕಗಳು), ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ (ಸಂಪಾದನೆ), ಸಿರಿಗನ್ನಡ (ಸಂಪಾದಿತ ಇಂಗ್ಲಿಷ್ ಕೃತಿ) ಅವರ ಪ್ರಕಟಿತ ಕೃತಿಗಳು. ಯು. ಆರ್. ಅನಂತಮೂರ್ತಿಯವರ ಹಿಂದುತ್ವ ಅಥವಾ ಹಿಂದ್ ಸ್ವರಾಜ್ಯ ಕೃತಿಯ ಇಂಗ್ಲಿಷ್ ಆವೃತ್ತಿಯ ಸಹ ಅನುವಾದಕರಾಗಿದ್ದಾರೆ.

ವಿವೇಕ ಶಾನಭಾಗ

BY THE AUTHOR