ಪೊಲೀಸ್ ಇಲಾಖೆಯಲ್ಲೇ ಕೆಲಸ ಮಾಡಿದ ಸ್ವತಃ ಸೃಜನಶೀಲ ಸಾಹಿತಿಗಳೂ ಆಗಿದ್ದ ಬೀchi ಅವರಿಗೆ ಪತ್ತೇದಾರಿ ಕಾದಂಬರಿಗಳನ್ನು ಕಂಡರೆ ಆಗುತ್ತಿರಲಿಲ್ಲ ಎನ್ನುವುದು ಪರಮಾಶ್ಚರ್ಯದ ಸಂಗತಿ. ’ಸತ್ತವನು ಎದ್ದು ಬಂದಾಗ’ ಕೃತಿಯ ಪ್ರಸ್ತಾವನೆಯಲ್ಲಿ ಖುದ್ದು ಅವರೇ ಪತ್ತೇದಾರಿ ಕಾದಂಬರಿಗಳ ಬಗ್ಗೆ ಮೂಗು ಮುರಿಯುವಂತಹ ಮಾತುಗಳನ್ನು ಆಡಿದ್ದಾರೆ.
ಆದರೆ ಸತ್ತವನು ಎದ್ದು ಬಂದಾಗ ಕೃತಿ ಪತ್ತೇದಾರಿ ಛಾಯೆ ಹೊಂದಿದೆ ಎನ್ನುವುದು ಮತ್ತೊಂದು ಸ್ವಾರಸ್ಯಕರ ಸಂಗತಿ. ಕಾದಂಬರಿಕಾರರೇ ಉಲ್ಲೇಖಿಸಿರುವಂತೆ ಈ ಶೈಲಿಯಲ್ಲಿ ಅವರು ಬರೆದ ಮೊದಲ ಮತ್ತು ಕೊನೆಯ ಕಾದಂಬರಿ ಇದು.
’ನಾನಿಲ್ಲಿ ಕಥಾವಸ್ತುವಾಗಿ ಅಳವಡಿಸಿಕೊಂಡಿರುವ ಘಟನೆಯೂ ನಿತ್ಯ ಜೀವನದಲ್ಲಿ ಕಾಣುವಂತಹದಕ್ಕೆ ಕಾಣುವಂತಹದಾಗಬಾರದು ಕೂಡ ಇಂತಹ ಪಾಪಕೃತ್ಯವು ಸರ್ವಸಾಮಾನ್ಯವಾಗಿಬಿಟ್ಟರೆ, ನಮ್ಮನ್ನು ಕಾಪಾಡುವ ಆ ದೇವನು ತನ್ನನ್ನೂ ತಾನು ಕಾಪಾಡಿಕೊಳ್ಳಲಾರ. ಸಾಹಿತ್ಯವು ಜೀವನದ 'ಫೋಟೊ' ಅಲ್ಲ-ಒಂದು ಚಿತ್ರ! ಕ್ಯಾಮರಾದಿಂದ ತೆಗೆದುದಲ್ಲ ಕುಂಚಿನಿಂದ ಬಂದುದು, ಪೆನ್ನಿನಿಂದ ಹರಿದುದು. ಈ ಜಾತಿಯ ನಾಪತ್ತೇದಾರಿ ಕೃತಿಯೂ ಒಂದು ಇರಲಿ ಎಂದು ಬರೆದಿದ್ದೇನೆ ಅಷ್ಟ ಇದೇ ನನ್ನ ಮೊದಲನೆಯ ತಪ್ಪು ಪ್ರಾಯಶಃ ಕಡೆಯದಾದರೂ ಆಶ್ಚರ್ಯವಿಲ್ಲ ದುಖವಿಲ್ಲ’ ಎಂದು ತಮ್ಮದೇ ಹಾಸ್ಯದ ಧಾಟಿಯಲ್ಲಿ ಅವರು ಹೇಳಿದ್ದಾರೆ.
ಹಾಗೆಂದೇ ಬೀchi ಕಾದಂಬರಿಯನ್ನು ಡಿಟೆಕ್ಟೀವ್ (ಪತ್ತೇದಾರಿ) ಎಂದು ಕರೆಯಲು ಬಯಸದೇ ’ಡಿಫೆಕ್ಟೀವ್’ (ದೋಷಯುಕ್ತ) ಎಂದು ಮನೋಜ್ಞವಾಗಿ ಉಲ್ಲೇಖಿಸಿರುವುದು.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE